ಐಪಿಎಲ್‌ 2022: ಹೊಸ ರೂಲ್ಸ್‌ ಜಾರಿಗೆ ತಂದ ಬಿಸಿಸಿಐ, ಏನದು ನೋಡಿ…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂಡಿಯನ್‌ ಪ್ರೀಮಿಯರ್‌ ಲೀಗ್‌ 15ನೇ ಆವೃತ್ತಿ ಆರಂಭಕ್ಕೂ ಮುನ್ನ ಬಿಸಿಸಿಐ ಹೊಸ ನಿಯಮ ಜಾರಿಗೆ ತಂದಿದೆ.
ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ 10 ತಂಡಗಳು ಟ್ರೋಫಿಗಾಗಿ ಸೆಣೆಸಾಡಲಿವೆ. ಮೊದಲ ದಿನ ಅಂದರೆ ಮಾ.16ಕ್ಕೆ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಮುಖಾಮುಖಿಯಾಗಲಿವೆ.
65 ದಿನಗಳ ಕಾಲ ನಡೆಯಲಿರುವ ಈ ಪಂದ್ಯದಲ್ಲಿ 70 ಲೀಗ್ ಪಂದ್ಯಗಳು ಮತ್ತು 4 ಪ್ಲೇ ಆಫ್ ಪಂದ್ಯಗಳು ನಡೆಯಲಿವೆ.
ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗೆ ಬಿಸಿಸಿಐ ಹೊಸ ರೂಲ್ಸ್ ತಂದಿದೆ.

ಏನದು ಹೊಸ ರೂಲ್ಸ್?

  • 2022 ಐಪಿಎಲ್‌ ಲೀಗ್‌ ನಲ್ಲಿ ಡಿಸಿಷನ್‌ ರಿವ್ಯೂ ಸಿಸ್ಟಮ್‌ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿದೆ. ಹೊಸ ನಿಯಮದ ಪ್ರಕಾರ, ಈ ಆವೃತ್ತಿಯ ಪ್ರತಿ ಇನ್ನಿಂಗ್ಸ್‌ ನಲ್ಲಿ ಎರಡೂ ತಂಡಗಳು ಅಂಪೈರ್‌ ತೀರ್ಪಿನ ವಿರುದ್ಧ 2 ಬಾರಿ ರಿವ್ಯೂ ಪಡೆಯಬಹುದು ಎಂದು ತಿಳಿಸಿದೆ.
  • ಬ್ಯಾಟರ್‌ (ಸ್ಟ್ರೈಕರ್) ಕ್ಯಾಚ್‌ ನೀಡಿ ಔಟ್‌ ಆದರೆ, ಅವರ ಜಾಗಕ್ಕೆ ಹೊಸ ಬ್ಯಾಟರ್‌ ಬಂದು ಆಡಬೇಕೇ ಹೊರತು ನಾನ್‌ ಸ್ಟ್ರೈಕರ್‌, ಸ್ಟ್ರೈಕರ್‌ ಜಾಗ ಪಡೆದುಕೊಳ್ಳುವಂತಿಲ್ಲ.
  • ಫೈನಲ್‌ ಅಥವಾ ಪ್ಲೈ ಆಫ್‌ ನಲ್ಲಿ ಟೈ ಆದ ಬಳಿಕ ಸೂಪರ್‌ ಓವರ್‌ ನಲ್ಲಿಯೂ ಯಾವುದೇ ನಿರ್ಧಾರ ಕೈಗೊಳ್ಳಲಾಗದಿದ್ದರೆ ಲೀಗ್‌ ಹಂತದಲ್ಲಿ ತಂಡದ ಪ್ರದರ್ಶನದ ಮೇಲೆ ಫಲಿತಾಂಶ ನೀಡಲಾಗುತ್ತದೆ. ಲೀಗ್‌ ಪಂದ್ಯದಲ್ಲಿ ಮೊದಲ ಸ್ಥಾನದಲ್ಲಿರುವ ತಂಡವನ್ನು ವಿಜೇತ ತಂಡ ಎಂದು ಘೋಷಿಸಲಾಗುತ್ತದೆ.
  • ಇದರ ಜತೆಗೆ ತಂಡದ ಯಾರೊಬ್ಬ ಸದಸ್ಯರು ಕೋವಿಡ್‌ ಸೋಂಕಿಗೆ ತುತ್ತಾಗಿ ಉಳಿದ ಸದಸ್ಯರು ಮೈದಾನಕ್ಕಿಳಿಯಲು ಸಾಧ್ಯವಾಗದಿದ್ದರೆ, ಆ ತಂಡಕ್ಕೆ ಮತ್ತೊಂದು ದಿನ ಅವಕಾಶ ಕಲ್ಪಿಸಬೇಕಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!