ಪಂಜಾಬ್‌ ಕಿಂಗ್ಸ್‌ ನಿಂದ ಕುಂಬ್ಳೆ ನಿರ್ಗಮನ: ವಿಶ್ವಕಪ್‌ ಗೆಲ್ಲಿಸಿದ ಕೋಚ್‌ಗೆ ಮಣೆ ಹಾಕಿದ ಫ್ರಾಂಚೈಸಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐಪಿಎಲ್‌ 2023ರ ಆವೃತ್ತಿಗೆ ಪಂಜಾಬ್ ಕಿಂಗ್ಸ್ ದೊಡ್ಡ ಬದಲಾವಣೆಗಳೊಂದಿಗೆ ಕಣಕ್ಕಿಳಿಯುತ್ತಿದೆ. ಲೆಜೆಂಡರಿ ಆಟಗಾರ ಅನಿಲ್‌ ಕುಂಬ್ಳೆ ಅವರನ್ನು ತಂಡದ ಮುಖ್ಯ ಕೋಚ್‌ ಜವಾಬ್ದಾರಿಯಿಂದ ಮುಕ್ತಗೊಳಿಸಿರುವ ಪ್ರಾಂಚೈಸಿ, ಅವರ ಸ್ಥಾನಕ್ಕೆ ಟ್ರೆವರ್ ಬೇಲಿಸ್ ಅವರನ್ನು ಹೊಸ ಮುಖ್ಯ ತರಬೇತುದಾರರನ್ನಾಗಿ ನೇಮಿಸಿದೆ. ಶುಕ್ರವಾರ ಈ ನಿರ್ಧಾರವನ್ನು ಪ್ರಾಂಚೈಸಿ ಅಧಿಕೃತವಾಗಿ ಪ್ರಕಟಿಸಿದೆ.
ಟ್ರಾವಿಸ್‌ ಬೆಲಿಸ್‌ ಕೋಚ್‌ ಆಗಿ ಪ್ರಚಂಡ ಯಶಸ್ಸು ಸಾಧಿಸಿದ್ದಾರೆ. 2007 ರಲ್ಲಿ ಶ್ರೀಲಂಕಾ ಕೋಚ್‌ ಆಗಿ ತಂಡವನ್ನು ಏಕದಿನ ವಿಶ್ವಕಪ್ ಫೈನಲ್‌ಗೆ ಏರಿಸಿದ್ದರು. ಆ ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡದ ಕೋಚ್ ಹುದ್ದೆ ವಹಿಸಿಕೊಂಡಿದ್ದರು. ಈ ವೇಳೆ ಕೋಲ್ಕತ್ತಾ ತಂಡ 2012 ಮತ್ತು 2014ರಲ್ಲಿ 2 ಬಾರಿ ಐಪಿಎಲ್ ಟ್ರೋಫಿ ಗೆದ್ದಿತ್ತು. ಬಳಿಕ ಇಂಗ್ಲೆಂಡ್ ಕೋಚ್‌ ಆದ ಬೇಲಿಸ್ ಮಾರ್ಗದರ್ಶನದಲ್ಲಿ ಇಂಗ್ಲೆಂಡ್‌ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್‌ ಗೆದ್ದಿತ್ತು. ಆ ಬಳಿಕ ಸನ್‌ರೈಸರ್ಸ್ ಕೋಚ್‌ ಆದ ಬೇಲಿಸ್ ಹೈದರಾಬಾದ್ ‌ತಂಡವನ್ನು 2020ರಲ್ಲಿ ಪ್ಲೇ ಆಫ್‌ಗೆ ಏರಿಸಿದ್ದರು.

ಪಂಜಾಬ್ ಕಿಂಗ್ಸ್‌ನೊಂದಿಗೆ ಮುಖ್ಯ ಕೋಚ್‌ನ ಪಾತ್ರವನ್ನು ನೀಡಿರುವುದು ನನಗೆ ಗೌರವವಾಗಿದೆ. ಪ್ರತಿಭಾವಂತ ಆಟಗಾರರ ತಂಡದೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆʼ ಎಂದು ಬೇಲಿಸ್ ತಮ್ಮ ನೇಮಕಾತಿಯ ಬಳಿಕ ನಂತರ ಹೇಳಿದ್ದಾರೆ.
2014 ರ ಋತುವಿನಲ್ಲಿ ಫೈನಲ್ ತಲುಪಿದ್ದ ಪಂಜಾಬ್ ಕಿಂಗ್ಸ್ ಆ ಬಳಿಕ ಪ್ಲೇ-ಆಫ್‌ಗೆ ಅರ್ಹತೆಯನ್ನೇ ಪಡೆದಿಲ್ಲ. ಕುಂಬ್ಳೆ ಅವರ ಅಧಿಕಾರಾವಧಿಯಲ್ಲಿ, PBKS 2020, 2021 ಮತ್ತು 2022 ರಲ್ಲಿ 6 ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!