ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2025 ರ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಬೆಂಗಳೂರು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಇತ್ತ ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಐಪಿಎಲ್ ಸೀಸನ್ 18, ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿದೆ.ಜಗಮಗಿಸುವ ಲೈಟ್ಸ್, ಅದ್ಧೂರಿಯಾದ ಸ್ಟೇಜ್, ಸ್ಟೇಡಿಯಂ ಗ್ಯಾಲರಿಯಲ್ಲಿದ್ದ ಲಕ್ಷಾಂತರ ಅಭಿಮಾನಿಗಳ ಮಧ್ಯೆ ಐಪಿಎಲ್ ಸೀಸನ್ 18, ಗ್ರ್ಯಾಂಡ್ ಓಪನಿಂಗ್ ಪಡದುಕೊಂಡಿದೆ.
ಬಾಲಿವುಡ್ ಸೂಪರ್‌ಸ್ಟಾರ್ ಹಾಗೂ ಕೆಕೆಆರ್ ತಂಡದ ಓನರ್ ಶಾರುಖ್ ಖಾನ್ ಕೂಡ ಅಭಿಮಾನಿಗಳಿಗೆ ಬಿಗ್ ಟ್ರೀಟ್ ನೀಡಿದರು. ಕೆಕೆಆರ್ ತಂಡದ ಸದಸ್ಯರು ಹಾಗೂ ವಿರಾಟ್ ಕೊಹ್ಲಿ ಸೇರಿದಂತೆ ಆರ್ಸಿಬಿ ಆಟಗಾರರು ಕೂಡ ಮನರಂಜನೆಯಲ್ಲಿ ಭಾಗಿಯಾಗಿ ಖುಷಿ ಪಟ್ಟರು.
ಲಕ್ಷಾಂತರ ಅಭಿಮಾನಿಗಳನ್ನು ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್, ಗಾಯಕಿ ಶ್ರೇಯಾ ಘೋಷಾಲ್, ಪಂಜಾಬಿನ ಸನ್ಷೆಷನಲ್ ಕರಣ್ ಔಜ್ಲಾ ಹಾಗೂ ಬಾಲಿವುಡ್ ನಟಿ ದಿಶಾ ಪಟಾನಿ ರಂಜಿಸಿದರು. ಪಂದ್ಯ ಆರಂಭಕ್ಕೂ ಮೊದಲೇ ಅಂದರೆ 30 ನಿಮಿಷಗಳ ಮೊದಲು ಉದ್ಘಾಟನಾ ಪಂದ್ಯಕ್ಕಾಗಿ ಮನರಂಜನಾ ಸಮಾರಂಭವನ್ನು ಭರ್ಜರಿಯಾಗಿ ನಡೆಸಿಕೊಡಲಾಯಿತು.