ಹೊಸದಿಗಂತ ಡಿಜಿಟಲ್ ಡೆಸ್ಕ್
ಕನ್ನಡಿಗ, ಟೀಂ ಇಂಡಿಯಾ ಆಟಗಾರ, ಪಂಜಾಬ್ ಕಿಂಗ್ಸ್ ಮಾಜಿ ನಾಯಕ ಮಾಯಾಂಕ್ ಅಗರ್ವಾಲ್ 8.25 ಕೋಟಿಗೆ ಸನ್ ರೈಸರ್ಸ್ ಹೈದ್ರಾಬಾದ್ ತಂಡಕ್ಕೆ ಮಾರಾಟವಾಗಿದ್ದಾರೆ. RCB ಮತ್ತು PBKS ಮಯಾಂಕ್ಗೆ ಪ್ರಾರಂಭದಲ್ಲಿ ಪೈಪೋಟಿ ನಡೆಸಿದವು. ಆ ಬಳಿಕ CSK ರೇಸ್ಗೆ ಪ್ರವೇಶಿಸಿತು. ಬಿಡ್ 4 ಕೋಟಿ ದಾಟಿದ ಮೇಲೆ ಆರ್ಸಿಬಿ ಬಿಡ್ಡಿಂಗ್ ನಿಂದ ಹಿಂದೆ ಸರಿಯಿತು. ಆ ಬಳಿಕ ಸಿಎಸ್ ಕೆ ಹಾಗೂ ಎಸ್ ಆರ್ ಎಚ್ ಪೈಪೋಟಿ ನಡೆಸಿದವು. CSK 8 ವರೆಗೆ ಬಿಡ್ ಮಾಡಿತ್ತು. SRH ಅಂತಿಮವಾಗಿ 8.25 ಕೋಟಿಬಿಡ್ ಮಾಡಿ ಮಾಯಾಂಕ್ ರನ್ನು ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಸಫಲವಾಯಿತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ