Monday, March 1, 2021

Latest Posts

ಐಪಿಎಲ್ ಹರಾಜು: ಕ್ರಿಸ್ ಮೋರಿಸ್‌ಗೆ ದಾಖಲೆಯ ಮೊತ್ತ ಎಷ್ಟು ಗೊತ್ತಾ?

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಐಪಿಎಲ್‌ಗೆ ಕೆಲವು ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ದಕ್ಷಿಣ ಆಫ್ರಿಕಾದ ಕ್ರಿಸ್ ಮೋರಿಸ್ ದಾಖಲೆಯ 16.25 ಕೋಟಿ ರೂ.ಗಳಿಗೆ ಮಾರಾಟವಾಗಿದ್ದಾರೆ. ಅವರನ್ನು ರಾಯಲ್ ಚಾಲೆಂಜರ್‍ಸ್ ತಂಡವು ಬಿಡುಗಡೆಗೊಳಿಸಿದ್ದು ಅವರನ್ನೀಗ ರಾಜಸ್ಥಾನ ರಾಯಲ್ಸ್  16.25 ಕೋ. ರೂ. ಕೊಟ್ಟು ಖರೀದಿಸಿದೆ. ಈ ಹಿಂದೆ ಯುವರಾಜ್ ಸಿಂಗ್ ಅವರು 16 ಕೋಟಿಗೆ ಮಾರಾಟವಾದುದೇ ದಾಖಲೆಯಾಗಿತ್ತು.
ಐಪಿಎಲ್‌ನಲ್ಲಿ ಉತ್ತಮ ನಿರ್ವಹಣೆ ನೀಡಿದ ಹೊರತಾಗಿಯೂ ರಾಯಲ್ ಚಾಲೆಂಜರ್‍ಸ್ ಮೋರಿಸ್‌ರನ್ನು ಬಿಡುಗಡೆ ಮಾಡಿದ್ದು ಹಲವರ ಹುಬ್ಬೇರಿಸಿತ್ತು.
ಇದೇವೇಳೆ, ಆರ್‌ಸಿಬಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು14.25 ಕೋಟಿ ರೂ.ಗೆ ಖರೀದಿಸಿದೆ. ರಿಚರ್ಡ್ಸನ್ ಕಿಂಗ್ಸ್ ಇಲೆವೆನ್ ಪಂಜಾಬ್‌ನಿಂದ 14  ಕೋಟಿ ಗೆ ಖರೀದಿಸಲ್ಪಟ್ಟಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!