IPL ಹರಾಜು । ಯಾರಿಗೂ ಬೇಡವಾದ ಕನ್ನಡಿಗ ದೇವದತ್ತ ಪಡಿಕಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಮೆಗಾ ಹರಾಜಿನಲ್ಲಿ ಆಟಗಾರರು ಸೇಲ್ ಆಗಿದ್ದಾರೆ. ರಿಷಬ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಇಬ್ಬರು ಐಪಿಎಲ್​​ ಆಕ್ಷನ್​ನಲ್ಲಿ ಭಾರೀ ಹಣವನ್ನು ಕೊಳ್ಳೆ ಹೊಡೆದಿದ್ದಾರೆ. ಸದ್ಯ ಮೆಗಾ ಆಕ್ಷನ್​​ನಲ್ಲಿ ಕನ್ನಡಿಗ ದೇವದತ್ತ ಪಡಿಕಲ್​​ ಅವರು ಅನ್​ಸೋಲ್ಡ್ ಆಗಿದ್ದಾರೆ.

ಈ ಐಪಿಎಲ್​​ನ ಮೆಗಾ ಆಕ್ಷನ್​​ನಲ್ಲಿ ದೇವದತ್ತ ಪಡಿಕಲ್ ಅವರು ಬೇಸ್ ಬೆಲೆ 2 ಕೋಟಿ ರೂಪಾಯಿಗಳನ್ನು ಪಡೆದಿದ್ದರು. ಆದರೆ ಹರಾಜಿನಲ್ಲಿ ಯಾವ ಫ್ರಾಂಚೈಸಿಯು ಪಡಿಕಲ್ ಅವರನ್ನು ಖರೀದಿ ಮಾಡಲು ಮುಂದೆ ಬರಲಿಲ್ಲ. ಹೀಗಾಗಿ ಹರಾಜು ಕೂಗಿದ ಕೆಲವೇ ಕ್ಷಣದಲ್ಲಿ ಅನ್​ಸೋಲ್ಡ್​ ಪ್ಲೇಯರ್ ಎಂದು ಘೋಷಣೆ ಮಾಡಲಾಯಿತು.

ದೇವದತ್ ಪಡಿಕ್ಕಲ್ ಅವರು ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಪಡಿಕಲ್ ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕ ಹಾಗೂ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದರು. 2021ರ ಜುಲೈನಲ್ಲಿ ಶ್ರೀಲಂಕಾ ವಿರುದ್ಧ T20I ಮ್ಯಾಚ್​ ವೇಳೆ ಪಡಿಕಲ್ ಅವರು ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಆದರೆ ಸದ್ಯ ನಡೆಯುತ್ತಿರುವ ಮೆಗಾ ಆಕ್ಷನ್​ನಲ್ಲಿ ಅನ್​ಸೋಲ್ಡ್ ಆಗಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!