ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ 2025ರ ಮೆಗಾ ಆಕ್ಷನ್ನಲ್ಲಿ ಆಟಗಾರರ ಹರಾಜು ಆರಂಭವಾಗಿದೆ. ಸದ್ಯ ಶ್ರೇಯಸ್ ಅಯ್ಯರ್ ಮೇಲೆ ಹಣದ ಹೊಳೆಯನ್ನೇ ಹರಿಸಲಾಗಿದೆ.
ಭಾರತದ ಸ್ಟಾರ್ ಬ್ಯಾಟ್ಸ್ಮನ್ ಆಗಿರುವ ಶ್ರೇಯಸ್ ಅಯ್ಯರ್ ಅವರಿಗೆ 26 ಕೋಟಿ 75 ಲಕ್ಷ ರೂಪಾಯಿಗಳನ್ನು ಕೊಟ್ಟು ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿ ಖರೀದಿ ಮಾಡಿದೆ. ಈ ಮೂಲಕ ಚಾಂಪಿಯನ್ ಟೀಮ್ನ ನಾಯಕ ಸೇಲ್ ಆಗಿದ್ದಾರೆ.
2024ರ ಐಪಿಎಲ್ನಲ್ಲಿ ಕೋಲ್ಕತ್ತಾ ಟೀಮ್ ಅನ್ನು ಶ್ರೇಯಸ್ ಅಯ್ಯರ್ ಅವರು ಚಾಂಪಿಯನ್ ಮಾಡಿದ್ದರು. ಹೀಗಾಗಿ ಶ್ರೇಯಸ್ ಅಯ್ಯರ್ ಅವರು ಕೋಟಿ ಕೋಟಿ ರೂಪಾಯಿಗಳನ್ನು ಜೇಬಿಗೆ ಇಳಿಸಿದ್ದಾರೆ.
ಮೆಗಾ ಆಕ್ಷನ್ನಲ್ಲಿ ಶ್ರೇಯಸ್ ಅಯ್ಯರ್ ಖರೀದಿ ಮಾಡಲು ಪಂಜಾಬ್ ಮತ್ತು ಡೆಲ್ಲಿ ಫ್ರಾಂಚೈಸಿ ಸಖತ್ ಪೈಪೋಟಿ ನಡೆಸಿದ್ದವು. ಕೋಲ್ಕತ್ತಾ ಟೀಮ್ನಲ್ಲಿದ್ದ ಶ್ರೇಯಸ್ ಅಯ್ಯರ್ ಅವರು ತಂಡದಿಂದ ಹೊರ ಬಂದಿದ್ದರು. ಹೀಗಾಗಿ ಮೆಗಾ ಹರಾಜಿನಲ್ಲಿ ಭಾರೀ ಹಣಕ್ಕೆ ಸೇಲ್ ಆಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಗೆ ಕ್ಯಾಪ್ಟನ್ ಅವಶ್ಯಕತೆ ಇರುವುದರಿಂದ 25.50 ಕೋಟಿಗಳ ಬಿಡ್ ಅನ್ನು ಕೂಗಿತ್ತು. ಆದರೆ ಪಂಜಾಬ್ ಕೊನೆ ಕ್ಷಣದಲ್ಲಿ 26.75 ಕೋಟಿ ಹರಾಜು ಕೂಗಿತು.