ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಐಪಿಎಲ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿವೆ. ಟಾಸ್ ಗೆದ್ದಿರುವ ಇಯಾನ್ ಮಾರ್ಗನ್ ನೇತೃತ್ವದ ತಂಡ ಬೌಲಿಂಗ್ ಆಯ್ದುಕೊಂಡಿದೆ.
ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಪಂದ್ಯ ಆರಂಭಗೊಂಡಿದ್ದು, ಬಲಿಷ್ಠ ಆರ್ಸಿಬಿ ಹಾಗೂ ಡೆಲ್ಲಿ ವಿರುದ್ಧ ಜಯ ಸಾಧಿಸುವ ಮೂಲಕ ಮಾರ್ಗನ್ ಪಡೆ 2014ರ ನಂತರ ಫೈನಲ್ಗೆ ಲಗ್ಗೆ ಹಾಕಿದೆ. ಇನ್ನು ದಾಖಲೆಯ 9ನೇ ಸಲ ಐಪಿಎಲ್ ಫೈನಲ್ಗೆ ಲಗ್ಗೆ ಹಾಕಿರುವ ಧೋನಿ ಬಳಗ,ಚಾಂಪಿಯನ್ ಆಗಿ ಹೊರಹೊಮ್ಮುವ ಇರಾದೆ ಇಟ್ಟುಕೊಂಡಿದೆ.
ಕೋಲ್ಕತ್ತಾ ನೈಟ್ ರೈಡರ್ಸ್: ಶುಬ್ಮನ್ ಗಿಲ್, ವೆಂಕಟೇಶ್ ಅಯ್ಯರ್,ರಾಹುಲ್ ತ್ರಿಪಾಠಿ,ನಿತೀಶ್ ರಾಣಾ,ಇಯಾನ್ ಮಾರ್ಗನ್(ಕ್ಯಾಪ್ಟನ್), ದಿನೇಶ್ ಕಾರ್ತಿಕ್(ವಿ.ಕೀ), ಹಸನ್, ಸುನಿಲ್ ನರೈನ್, ಫಾರ್ಗೂಸನ್, ವರುಣ್ ಚಕ್ರವರ್ತಿ,ಮಾವಿ
ಚೆನ್ನೈ ಸೂಪರ್ ಕಿಂಗ್ಸ್: ಡು ಪ್ಲೆಸಿಸ್, ಋತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ರಾಯುಡು, ರಾಬಿನ್ ಉತ್ತಪ್ಪ, ಎಂಎಸ್ ಧೋನಿ(ವಿ,ಕೀ, ಕ್ಯಾಪ್ಟನ್), ರವೀಂದ್ರ ಜಡೇಜಾ, ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಹ್ಯಾಜಲ್ವುಡ್