IPL | ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ RCB: ನೆಕ್ಸ್ಟ್ ಟಾರ್ಗೆಟ್ ಯಾರು? ಯಾವಾಗ? ಎಲ್ಲಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

IPL ಸೀಸನ್ 18 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್​ಸಿಬಿ ಜಯ ಸಾಧಿಸುವ ಮೂಲಕ IPL ನೂತನ ಸೀಸನ್ ಅನ್ನು ಸ್ವಾಗತಿಸಿತು. ಈ ಮೂಲಕ ಸತತ ಗೆಲುವುಗಳೊಂದಿಗೆ ಆರ್‌ಸಿಬಿ IPL ಸೀಸನ್ 18 ಅವಧಿಯನ್ನು ಪ್ರಾರಂಭಿಸಿದ್ದಾರೆ.

ಸದ್ಯ ಆರ್​ಸಿಬಿ ತಂಡವು ಮುಂದಿನ ಪಂದ್ಯವನ್ನೂ ಗೆದ್ದು ಹ್ಯಾಟ್ರಿಕ್ ಜಯಗಳಿಸುವ ಗುರಿಯನ್ನು ಹೊಂದಿದೆ. ಸಿಎಸ್‌ಕೆ ವಿರುದ್ಧ ಜಯಗಳಿಸಿದ ನಂತರ ಆರ್‌ಸಿಬಿ ತನ್ನ ಮುಂದಿನ ಪಂದ್ಯಕ್ಕಾಗಿ ತವರು ನೆಲ ಬೆಂಗಳೂರಿಗೆ ಬಂದಿದೆ. ಮುಂದಿನ ಪಂದ್ಯ ಏಪ್ರಿಲ್ 2 ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ನಡೆಯಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ಪಂದ್ಯ ಸಂಜೆ 7:30 ಕ್ಕೆ ಶುರುವಾಗಲಿದೆ. 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!