Saturday, July 2, 2022

Latest Posts

BREAKING NEWS: ಐಪಿಎಲ್‌ಗೆ ದಾಪುಗಾಲಿಟ್ಟ ಕೊರೋನಾ: ಐಪಿಎಲ್-2021 ಟೂರ್ನಿ ರದ್ದು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಈಗಾಗಲೇ ಕೊರೋನಾ ಎಲ್ಲ ಕ್ಷೇತ್ರಗಳಲ್ಲೂ ಕಾಲಿಟ್ಟಿದ್ದು ಇದೀಗ ಹಲವು ಆಟಗಾರರಿಗೆ ಕೊರೋನಾ ಸೋಂಕು ತಗುಲಿದ್ದು, ಐಪಿಎಲ್-2021 ಟೂರ್ನಿಯನ್ನು ಬಿಸಿಸಿಐ ರದ್ದು ಮಾಡಿದೆ.
ಈ ಕುರಿತು ಬಿಸಿಸಿಐ ಉಪ ನಿರ್ದೇಶಕ ರಾಜೀವ್ ಶುಕ್ಲಾ ಮಾತನಾಡಿ, ಈ ಬಾರಿ ಐಪಿಎಲ್ ಟೂರ್ನಿ ಕ್ಯಾನ್ಸಲ್ ಆಗಲು ಕೊರೋನಾ ಕಾರಣ ಎಂದಿದ್ದಾರೆ.
ನಿನ್ನೆಯಷ್ಟೇ ಕೊರೋನಾ ಕಾರಣದಿಂದ ಕೆಕೆಆರ್ ಹಾಗೂ ಆರ್‌ಸಿಬಿ ಪಂದ್ಯ ರದ್ದಾಗಿದ್ದು, ಇದೀಗ ಆಟಗಾರರು ಹಾಗೂ ಸಪೋರ್ಟ್ ಸ್ಟಾಫ್‌ಗೆ ಕೊರೋನಾ ಸೋಂಕು ದೃಢಪಟ್ಟಿರುವುದರಿಂದ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ರದ್ದು ಮಾಡಿದೆ.
ನಿನ್ನೆ ಕೆಕೆಆರ್ ತಂಡದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್‌ಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಜೊತೆಗೆ ದೆಹಲಿ ಆಟಗಾರರು ಕೂಡ ಐಸೋಲೇಟ್ ಆಗಿದ್ದರು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಎಲ್.ಬಾಲಾಜಿ ಅವರಿಗೂ ಸೋಂಕು ದೃಢಪಟ್ಟಿತ್ತು, ಈ ಹಿನ್ನೆಲೆ ತಂಡವನ್ನು ಐಸೋಲೇಟ್ ಮಾಡಲಾಗಿತ್ತು. ಇಂದು ನಡೆಯಬೇಕಿದ್ದ ಮುಂಬೈ ಹಾಗೂ ಹೈದರಾಬಾದ್ ಪಂದ್ಯಕ್ಕೂ ಮುನ್ನ ಕೊರೋನಾ ಪರೀಕ್ಷೆ ನಡೆಸಿದ್ದು, ಹೈದರಾಬದ್ ತಂಡದ ಆಟಗಾರನಿಗೂ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ಬಿಸಿಸಿಐ ಐಪಿಎಲ್ ಪದ್ಯವನ್ನು ರದ್ದುಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss