spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಐಪಿಎಲ್: ಮೈದಾನದಲ್ಲಿ ಪ್ರೇಕ್ಷಕರಿಗೂ ಅವಕಾಶ

- Advertisement -Nitte

ಹೊಸ ದಿಗಂತ ಆನ್ ಲೈನ್ ಡೆಸ್ಕ್

ಯುಎಇಯಲ್ಲಿ ಐಪಿಎಲ್ ಪುನರಾರಂಭಗೊಳ್ಳಲು ಕೆಲವೇ ದಿನಗಳು ಉಳಿದಿವೆ. ಭಾರತದಲ್ಲಿ ಖಾಲಿ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯಗಳು ಯುಎಇಯಲ್ಲಿ ಸೀಮಿತ ಸಂಖ್ಯೆಯ ಪ್ರೇಕ್ಷಕರ ಸಮ್ಮುಖದಲ್ಲಿ ನಡೆಯಲಿದೆ.
ಸೆಪ್ಟೆಂಬರ್ 16ರಿಂದ ಟಿಕೆಟ್‌ಗಳು ದೊರಕಲಿವೆ ಎಂಬುದಾಗಿ ಬಿಸಿಸಿಐ ಪ್ರಕಟಿಸಿದೆ. ಯುಎಇಯಲ್ಲಿ ಎಲ್ಲರಿಗೂ ಲಸಿಕೆ ನೀಡಿಯಾಗಿರುವುದರಿಂದ ಪ್ರೇಕ್ಷಕರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಜೊತೆಗೇ ಅಕ್ಟೋಬರ್‌ನಿಂದ ಇಲ್ಲಿಯೇ   ಟಿ20 ವಿಶ್ವಕಪ್ ನಡೆಯಲಿರುವುದರಿಂದ ಅದಕ್ಕೆ ರಿಹರ್ಸಲ್ ಆಗಿ ಕೂಡ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.
ಒಟ್ಟು ಮೂರು ತಾಣಗಳಲ್ಲಿ ಪಂದ್ಯಗಳು ನಡೆಯುವವು. ಅವೆಂದರೆ ದುಬಾಯಿ, ಅಬುದಾಬಿ ಮತ್ತು ಶಾರ್ಜಾ.
ಸೆ.19ರಂದು ದುಬಾಯಿಯಲ್ಲಿ  ನಡೆಯುವ ಮೊದಲ ಪಂದ್ಯದಲ್ಲಿ  ಹಾಲಿ ಚಾಂಪ್ಯನ್ ಮುಂಬೈ ಇಂಡಿಯನ್ಸ್ ತಂಡವು ಚೆನ್ನೈ ಸೂಪರ್‌ಕಿಂಗ್ಸ್‌ನ್ನು ಎದುರಿಸಲಿದೆ.
ಮರುದಿನ ಅಬುದಾಯಿಯಲ್ಲಿ ಆರ್‌ಸಿಬಿ ತಂಡವು ಕೆಕೆಆರ್ ತಂಡವನ್ನು ಎದುರಿಸುವುದು. ಶಾರ್ಜಾ ಕ್ರೀಡಾಂಗಣದಲ್ಲಿ  ಮೊದಲ ಪಂದ್ಯವು ಸೆ.24ರಂದು ನಡೆಯುವುದು. ಅಂದು ಆರ್‌ಸಿಬಿ ತಂಡವು ಚೆನ್ನೈ ತಂಡವನ್ನು ಎದುರಿಸುವುದು.
ಈವರೆಗೆ ನಡೆದ ಐಪಿಎಲ್ ಪಂದ್ಯಗಳಲ್ಲಿ ದಿಲ್ಲಿ ಕ್ಯಾಪಿಟಲ್ಸ್ 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಚೆನ್ನೈ ತಂಡವು 10 ಅಂಕಗಳೊಂದಿಗೆ ದ್ವೀತಿಯ ಸ್ಥಾನಿಯಾಗಿದೆ. ಆರ್‌ಸಿಬಿ ಕೂಡ  10 ಅಂಕ ಪಡೆದಿದ್ದರೂ ನೆಟ್ ರನ್‌ರೇಟ್ ಆಧಾರದಲ್ಲಿ ಮೂರನೇ ಸ್ಥಾನದಲ್ಲಿದೆ.
ಆದರೆ ಯುಎಇಯಲ್ಲಿನ ಪಿಚ್ ಪರಿಸ್ಥಿತಿಯು ಭಾರತದ ಪಿಚ್‌ಗಳಿಗಿಂತ ಭಿನ್ನವಾಗಿರುವುದರಿಂದ ಮುಂದಿನ ಹಂತದಲ್ಲಿ  ತಂಡಗಳ ನಿರ್ವಹಣೆಯೂ ಏರುಪೇರಾಗಬಹುದು. ಅದರ ಜತೆಗೇ ಕೆಲವು ತಂಡಗಳು ಪ್ರಮುಖ ಆಟಗಾರರ ಅನುಪಸ್ಥಿತಿಯನ್ನೂ ಎದುರಿಸುತ್ತಿವೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss