ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರೈಲ್ವೆ ಪ್ರಯಾಣಿಕರಿಗೆ IRCTC ಗುಡ್ ನ್ಯೂಸ್: ಐ ಪೇ ಮೂಲಕ ಟಿಕೆಟ್ ಬುಕ್ಕಿಂಗ್ ರದ್ದು ಮಾಡಿದಲ್ಲಿ ತಕ್ಷಣವೇ ಬರುತ್ತೆ ನಿಮ್ಮ ಹಣ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ರೈಲ್ವೆ ಪ್ರಯಾಣಿಕರಿಗೆ ಐಆರ್​ಸಿಟಿಸಿ ಗುಡ್ ನ್ಯೂಸ್ ನೀಡಿದ್ದು, ಆನ್​​ಲೈನ್​​ನಲ್ಲಿ ಕಾಯ್ದಿರಿಸಿದ ರೈಲ್ವೆ ಟಿಕೆಟ್​​ಗಳನ್ನ ರದ್ದುಗೊಳಿಸಿದ ಮೂರ್ನಾಲ್ಕು ದಿನಗಳವರೆಗೂ ಮರುಪಾವತಿಗಾಗಿ ಕಾಯುತ್ತಿದ್ದ ಪ್ರಯಾಣಿಕರಿಗೆ ಐಆರ್​ಸಿಟಿಸಿ ಐ ಪೇ ಮೂಲಕ ಟಿಕೆಟ್​​ ಕಾಯ್ದಿರಿಸಿದವರು ಬುಕ್ಕಿಂಗ್ ರದ್ದು ಮಾಡಿದಲ್ಲಿ ತಕ್ಷಣವೇ ಅವರ ಹಣ ಬ್ಯಾಂಕ್​ ಖಾತೆಗೆ ಮರುಪಾವತಿ ಆಗಲಿದೆ.
2019ರಲ್ಲಿ ಕೇಂದ್ರ ಸರ್ಕಾರದ ಡಿಜಿಟಲ್​ ಇಂಡಿಯಾ ಅಭಿಯಾನದ ಪರವಾಗಿ ಐಆರ್​ಸಿಟಿಸಿ ಐ ಪೇಯನ್ನು ಲಾಂಚ್​ ಮಾಡಲಾಗಿತ್ತು.
ಇನ್ನು ಈ ವಿಚಾರವಾಗಿ ಮಾಹಿತಿ ನೀಡಿದ ಐಆರ್​ಸಿಟಿಸಿ ವಕ್ತಾರ, ಈ ಹೊಸ ವ್ಯವಸ್ಥೆಯಿಂದಾಗಿ ಪ್ರಯಾಣಿಕರಿಗೆ ತತ್ಕಾಲ್​ ಹಾಗೂ ರೆಗ್ಯೂಲರ್​ ಟಿಕೆಟ್​ಗಳನ್ನ ತ್ವರಿತವಾಗಿ ಕಾಯ್ದಿರಿಸೋಕೆ ಸಾಧ್ಯವಾಗುತ್ತದೆ. ಐಆರ್​ಸಿಟಿಸಿ ಐ ಪೇ ಮೂಲಕ ತ್ವರಿತವಾಗಿ ಟಿಕೆಟ್​ ಬುಕ್​ ಆಗುವಂತೆ ವೆಬ್​ಸೈಟ್​ನ್ನು ನವೀಕರಿಸಿದ್ದೇವೆ ಎಂದು ಹೇಳಿದರು.
ಆರ್​ಐಸಿಟಿ ಐ ಪೇ ಮೂಲಕ ಟಿಕೆಟ್​ ಬುಕ್ ಮಾಡುವ ವಿಧಾನ ಇಲ್ಲಿದೆ ನೋಡಿ :
ಐಆರ್​ಸಿಟಿಸಿ ವೆಬ್​ಸೈಟ್​ನ್ನು ಓಪನ್​ ಮಾಡಿ (www.irctc.co.in), ಪ್ರಯಾಣ ಸಂಬಂಧಿ ಎಲ್ಲಾ ಮಾಹಿತಿಗಳನ್ನ ಒದಗಿಸಿ, ನಿಮ್ಮ ಮಾರ್ಗಕ್ಕೆ ಹೊಂದಿಕೆಯಾಗುವ ರೈಲನ್ನು ಆಯ್ಕೆ ಮಾಡಿ, ನಿಮ್ಮ ದಾಖಲೆಗಳನ್ನ ನೀಡಿ ವೆಬ್​ಸೈಟ್​​ಗೆ ಲಾಗಿನ್​ ಆಗಿ, ಪ್ರಯಾಣಿಕರ ಮಾಹಿತಿಯನ್ನ ಒದಗಿಸಿ, ಪಾವತಿಯ ಮಾರ್ಗವನ್ನ ಆಯ್ಕೆ ಮಾಡಿ. ಇಲ್ಲಿ ನೀವು ಐಆರ್​ಸಿಟಿಸಿ ಐ ಪೇ ಆಯ್ಕೆಯನ್ನ ಕ್ಲಿಕ್​ ಮಾಡಿ, ಪೇ & ಬುಕ್​ ಆಯ್ಕೆಯನ್ನ ಒತ್ತಿರಿ .

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss