ಕುದುರೆ ಮೇಲೆ ನಾಯಿ ಮರಿ ಸವಾರಿ ಬಲು ಜೋರು: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕುದುರೆ ಮೇಲೆ ಮನುಷ್ಯರು ಮಾತ್ರ ಸವಾರಿ ಮಾಡ್ಬೇಕಾ..? ಯಾಕೆ ನಾನು ಮಾಡಬಾರದಾ ಎಂದು ನಾಯಿಮರಿಯೊಂದು ಕುದುರೆ ಮೇಲೇರಿ ಸವಾರಿ ಮಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಗರದ ರಸ್ತೆಗಳಲ್ಲಿ ಓಡುತ್ತಿರುವ ಕುದುರೆಯ ಮೇಲೆ ನಾಯಿಮರಿಯು ಅಲ್ಲಾಡದಂತೆ ನಿಂತಿದೆ. ಇನ್ನೂ ಆಶ್ಚರ್ಯ ಅಂದ್ರೆ ರಸ್ತೆಗಳಲ್ಲಿ ಕೆಂಪು ಸಿಗ್ನಲ್‌ ಬಿದ್ದರೆ ವಾಃನಗಳಂತೆ  ನಿಲ್ಲುತ್ತದೆ. ಗ್ರೀನ್‌ ಸಿಗ್ನಲ್‌ ಬೀಳುತ್ತಿದ್ದಂತೆ ತನನ್‌ ಓಟವನ್ನು ಮುಂದುವರೆಸುತ್ತದೆ.

ಈ ವಿಡಿಯೋವನ್ನು ಇದುವರೆಗೆ 3 ಲಕ್ಷಕ್ಕೂ ಹೆಚ್ಚು ಜನವೀಕ್ಷಿಸಿದ್ದಾರೆ. 18 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ನೆಟ್ಟಿಗರು ಒಬ್ಬೊಬ್ಬರು ಒಂದೊಂದಕ್ಕೆ ಹೋಲಿಕೆ ಮಾಡಿದ್ದಾರೆ. ಕೆನಡಾದ ಟಿವಿ ಸಿರೀಸ್ ಜನಪ್ರಿಯ ಕಾರ್ಟೂನ್ ಪಾವ್ ಪೆಟ್ರೋಲ್ ಅನ್ನು ನೆನಪಿಸುತ್ತದೆ ಎಂದು ಕಮೆಂಟ್‌ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!