Friday, June 9, 2023

Latest Posts

SHOCKING| 26 ದಿನಗಳಲ್ಲಿ 55 ಜನರಿಗೆ ಮರಣ ದಂಡನೆ ವಿಧಿಸಿದ ಇರಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇರಾನ್‌ನ ಅಧಿಕಾರಿಗಳು 2023ರ ಹೊಸ ವರ್ಷದಲ್ಲಿ ಈಗಾಗಲೇ 55 ಜನರನ್ನು ಗಲ್ಲಿಗೇರಿಸಿದ್ದಾರೆ ಎಂದು ನಾರ್ವೆ ಮೂಲದ ಇರಾನ್ ಮಾನವ ಹಕ್ಕುಗಳ (ಐಎಚ್‌ಆರ್) ಸಂಘಟನೆ ತಿಳಿಸಿದೆ. 26 ದಿನಗಳಲ್ಲಿ ಇಷ್ಟೊಂದು ಜನರಿಗೆ ಮರಣದಂಡನೆ ವಿಧಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಮರಣದಂಡನೆಗೆ ಗುರಿಯಾದವರಲ್ಲಿ ಹೆಚ್ಚಿನವರು ಮಾದಕವಸ್ತು ಸಂಬಂಧಿತ ಆರೋಪಿಗಳು ಎಂದು ಬಹಿರಂಗಪಡಿಸಿದೆ.

ಇರಾನ್ ನಲ್ಲಿ ಹಿಜಾಬ್ ವಿರುದ್ಧ ದೊಡ್ಡ ಮಟ್ಟದ ಆಂದೋಲನ ನಡೆದಿರುವುದು ಗೊತ್ತೇ ಇದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಸಂಬಂಧಿಸಿದಂತೆ ನಾಲ್ವರಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ಐಹೆಚ್‌ಆರ್ ಹೇಳಿದೆ. ಇದಲ್ಲದೆ, ಇನ್ನೂ 107 ಜನರು ಮರಣದಂಡನೆಗೆ ಗುರಿಯಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಇರಾನ್‌ನಲ್ಲಿ ಮರಣದಂಡನೆಗೆ ಗುರಿಯಾಗುವವರ ಸಂಖ್ಯೆ ಹಲವಾರು ವರ್ಷಗಳಿಂದ ಹೆಚ್ಚುತ್ತಿದೆ. ರಾಜಕೀಯ ಕಾರಣಗಳಿಗಾಗಿ ಇರಾನ್ ಈ ಜನರನ್ನು ಗಲ್ಲಿಗೇರಿಸುತ್ತಿದೆ. ಮತ್ತೊಂದೆಡೆ, ಮಾನವ ಹಕ್ಕುಗಳ ಸಂಘಟನೆ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಕೂಡ ಇರಾನ್‌ನಲ್ಲಿ ಮೂವರು ಯುವಕರಿಗೆ ಮರಣದಂಡನೆ ವಿಧಿಸಲಾಗಿದೆ, ಅವರಲ್ಲಿ ಒಬ್ಬರಿಗೆ 18 ವರ್ಷ ವಯಸ್ಸಾಗಿದೆ ಎಂದು ತಿಳಿಸಿದೆ. ಇರಾನ್ ಸರ್ಕಾರವು ಮರಣದಂಡನೆ ಶಿಕ್ಷೆಯನ್ನು ವಿಧಿಸುವ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕಲು ಉದ್ದೇಶಿಸಿದೆ ಮತ್ತು ಪ್ರತಿಭಟನಾಕಾರರಲ್ಲಿ ಭಯವನ್ನು ಹುಟ್ಟುಹಾಕುತ್ತದೆ ಎಂದು ತೀವ್ರ ಟೀಕೆಗಳಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!