Saturday, August 13, 2022

Latest Posts

250 ಕೋಟಿ ರೂ. ಮೌಲ್ಯದ ಹೆರಾಯಿನ್ ಸಾಗಿಸುತ್ತಿದ್ದ ಇರಾನಿನ ಬೋಟ್ ವಶ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಗುಜರಾತ್ ಕರಾವಳಿಯ ಹಿಂದೂ ಮಹಾಸಾಗರದಲ್ಲಿ 150 ರಿಂದ 250 ಕೋಟಿ ರೂ. ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ಇರಾನಿಯನ್ ಬೋಟ್ ವೊಂದನ್ನು ಕರಾವಳಿ ಗಾರ್ಡ್ ಮತ್ತು ರಾಜ್ಯ ಭಯೋತ್ಪಾದನಾ ನಿಗ್ರಹ ದಳ ವಶಕ್ಕೆ ಪಡೆದಿದೆ.
ಶನಿವಾರ ತಡರಾತ್ರಿ ಕರಾವಳಿ ಗಾರ್ಡ್ ಮತ್ತು ರಾಜ್ಯ ಭಯೋತ್ಪಾದನಾ ನಿಗ್ರಹ ದಳ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 30 ರಿಂದ 50 ಕೆ.ಜಿ. ಹೆರಾಯಿನ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಗುಜರಾತ್ ನ ಎಟಿಎಸ್ ಡಿಐಜಿ ಹಿಮಾಂಶು ಶುಕ್ಲಾ ಮಾಹಿತಿ ನೀಡಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 150 ರಿಂದ 250 ಕೋಟಿ ರೂ. ಮೌಲ್ಯದ ಡ್ರಗ್ಸ್ ಸಾಗಿಸಲಾಗುತ್ತಿದ್ದ ಬೋಟ್ ಅನ್ನು ವಶಕ್ಕೆ ಪಡೆಯಲಾಗಿದೆ. ಬೋಟ್ ನಲ್ಲಿದ್ದ ಏಳು ಮಂದಿ ಇರಾನ್ ಮೂಲದ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆಗಾಗಿ ಬೋಟ್ ಅನ್ನು ಹತ್ತಿರದ ಬಂದರಿಗೆ ತರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss