ವಿಶ್ವಕಪ್ ಸೋಲು ಸಂಭ್ರಮಿಸಿದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಇರಾನ್ ಭದ್ರತಾ ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರಸ್ತುತ ಕತಾರ್‌ ನಲ್ಲಿ ಸಾಗುತ್ತಿರುವ ಫುಟ್ಬಾಲ್‌ ವಿಶ್ವಕಪ್‌ ನಲ್ಲಿ ಅಮೆರಿಕಾ ತಂಡವು ಇರಾನ್ ರಾಷ್ಟ್ರೀಯ ತಂಡವನ್ನು‌ ಸೋಲಿಸಿ ವಿಶ್ವಕಪ್‌ನಿಂದ ಹೊರಹಾಕಿದಾಗ ಸಂಭ್ರಮಿಸುತ್ತಿದ್ದ ಇರಾನ್‌ನ ವ್ಯಕ್ತಿಯೊಬ್ಬನನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಹಕ್ಕುಗಳ ಗುಂಪುಗಳು ತಿಳಿಸಿವೆ.
ಮಂಗಳವಾರ ರಾತ್ರಿ ಕತಾರ್‌ನಲ್ಲಿ ಇರಾನ್ ತನ್ನ ಪರಮ ಶತ್ರುವಾದ ಅಮೆರಿಕದ ಎದುರು ಸೋತು ವಿಶ್ವಕಪ್‌ನಿಂದ ಹೊರಬಿದ್ದಿತು. ಆ ಬಳಿಕ ಇರಾನ್‌ ಸರ್ಕಾರದ ವಿರೋಧಿ ಗುಂಪು ಬೀದಿಗಿಳಿದು ತ್ನನದೇ ದೇಶದ ಸೋಲನ್ನು ಸಭ್ರಮಿಸಿತ್ತು.
ಹಿಜಾ ಬ್‌ ಸರಿಯಾಗಿ ಧರಿಸದ ಕಾರಣಕ್ಕೆ ಮಹ್ಸಾ ಅಮಿನಿ ಎಂಬ ಯುವತಿ ಪೊಲೀಸ್ ಕಸ್ಟಡಿ ಸಾವನ್ನಪ್ಪಿದ ಬಳಿಕ ಇರಾನ್‌ ಪ್ರತಿಭಟನೆಗಳ ನಾಡಾಗಿದೆ. ಅಲ್ಲಿನ ರಕ್ತಪಿಪಾಸು ಸರ್ಕಾರದ ಮೇಲಿನ ಆಕ್ರೋಶಕ್ಕೆ ಜನರು ರಾಷ್ಟ್ರೀಯ ತಂಡವನ್ನು ಬೆಂಬಲಿಸಲು ನಿರಾಕರಿಸಿದರು. ಅವರು ರಾಷ್ಟ್ರೀಯ ಫುಟ್ಬಾಲ್‌ ತಂಡವನ್ನು ಸರ್ಕಾರದ ಒಂದು ಭಾಗದಂತೆ ಪರಿಗಣಿಸುತ್ತಾರೆ. ಟೆಹ್ರಾನ್‌ನ ವಾಯುವ್ಯ ಕ್ಯಾಸ್ಪಿಯನ್ ಸಮುದ್ರ ತೀರದಲ್ಲಿರುವ ಬಂದರ್ ಅಂಜಾಲಿ ಎಂಬ ನಗರದಲ್ಲಿ ತಂಡದ ಸೋಲು ಸಂಭ್ರಮಿಸುತ್ತಿದ್ದ ಮೆಹ್ರಾನ್ ಸಮಕ್ (27) ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ಮಾನವ ಹಕ್ಕುಗಳ ಗುಂಪುಗಳು ತಿಳಿಸಿವೆ.
ಸಮಕ್ “ಅಮೆರಿಕ ವಿರುದ್ಧ ರಾಷ್ಟ್ರೀಯ ತಂಡದ ಸೋಲಿನ ನಂತರ ಭದ್ರತಾ ಪಡೆಗಳು ನೇರವಾಗಿ ಆತನನ್ನು ಗುರಿಯಾಗಿಸಿ ತಲೆಗೆ ಗುಂಡು ಹಾರಿಸಲಾಯಿತು” ಎಂದು ಓಸ್ಲೋ ಮೂಲದ ಗುಂಪು ಇರಾನ್ ಮಾನವ ಹಕ್ಕುಗಳ ಗುಪು ಹೇಳಿದೆ. ನ್ಯೂಯಾರ್ಕ್ ಮೂಲದ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್ ಇನ್ ಇರಾನ್ (ಸಿಎಚ್‌ಆರ್‌ಐ) ಕೂಡ ಅವರು ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟರು ಎಂದು ವರದಿ ಮಾಡಿದೆ.
ಸಿಎಚ್‌ ಆರ್‌ಐ ಪ್ರಕಾರ, 18 ವರ್ಷದೊಳಗಿನ 60 ಮಕ್ಕಳು ಮತ್ತು 29 ಮಹಿಳೆಯರು ಸೇರಿದಂತೆ ಇರಾನ್‌ನ ಭದ್ರತಾ ಪಡೆಗಳು ಪ್ರತಿಭಟನೆಯ ನಿಗ್ರಹಕ್ಕಾಗಿ ಕನಿಷ್ಠ 448 ಜನರನ್ನು ಕೊಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!