Wednesday, August 17, 2022

Latest Posts

‘ಐರಿಸ್’- ಕಡಲತೀರದ ದೇಶಗಳ ಮನಗೆಲ್ಲುತ್ತಿರುವ ಮೋದಿ ಯೋಜನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ಲಾಸ್ಗೊದಲ್ಲಿ ನಡೆದ COP26 ಕೂಟದ ರಾಷ್ಟ್ರಗಳ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿರುವ ಹೊಸ ವ್ಯವಸ್ಥೆ ಐರಿಸ್. ‘Infrastructure for Resilient Island States’ (IRIS) ಎಂಬ ಈ ಒಕ್ಕೂಟ ಕಡಲ ತೀರದ ರಾಷ್ಟ್ರಗಳು ಹವಾಮಾನ ಬದಲಾವಣೆಯಿಂದ ಎದುರಿಸುವ ಸವಾಲುಗಳ ವಿರುದ್ಧ ಹೋರಾಡಲು ಸಹಕರಿಸುತ್ತದೆ. ಬಹಳ ಮುಖ್ಯವಾಗಿ ಭಾರತದ ಇಸ್ರೊ ಸಂಸ್ಥೆ ಈ ದೇಶಗಳಿಗೆ ತಂತ್ರಜ್ಞಾನ ಸಹಯೋಗವನ್ನು ನೀಡಲಿದೆ.
ಈ ವ್ಯವಸ್ಥೆಗೆ ಚಾಲನೆ ನೀಡುತ್ತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು- “ವಿಶ್ವದ ಸಾವಿರಾರು ಸಣ್ಣ ದ್ವೀಪ ರಾಷ್ಟ್ರಗಳು ಹವಾಮಾನ ಬದಲಾವಣೆಯಿಂದ ಸಾಕಷ್ಟು ಅಪಾಯ ಎದುರಿಸುತ್ತಿವೆ. ಅವುಗಳಿಗೆ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಹೊಸ ಭರವಸೆ, ಆತ್ಮವಿಶ್ವಾಸ ಹೆಚ್ಚಿಸುವ ಗುರಿಯನ್ನು ಐರಿಸ್ ಹೊಂದಿದೆ.”
ಈ ಐರಿಸ್ ಮಾಡಲಿರುವುದೇನು? ಪ್ರಧಾನಿ ನರೇಂದ್ರ ಮೋದಿ ಅವರೇ ವಿವರಿಸಿದಂತೆ, “ಕಡಲ ತೀರದ ದ್ಪೀಪರಾಷ್ಟ್ರಗಳಿಗೆ ಇಸ್ರೋ ಒಂದು ಮಾಹಿತಿ ವ್ಯವಸ್ಥೆಯನ್ನು ಸ್ಥಾಪಿಸಲಿದೆ. ಇದರ ಸಹಾಯದಿಂದ ಈ ದ್ವೀಪರಾಷ್ಟ್ರಗಳು ಚಂಡಮಾರುತಗಳ ಸುಳಿವನ್ನು ಮೊದಲೇ ತಿಳಿದು ತೆರವು ಕಾರ್ಯಾಚರಣೆಗಳನ್ನು ರೂಪಿಸಬಹುದು. ಇಸ್ರೋದ ಉಪಗ್ರಹ ಸೇವೆಯನ್ನು ಉಪಯೋಗಿಸಿಕೊಂಡು ಈ ದೇಶಗಳು ತಮ್ಮ ಹವಳದ ದಂಡೆಗಳನ್ನು, ತೀರ ಪ್ರದೇಶಗಳನ್ನು ರಕ್ಷಿಸುವುದಕ್ಕೆ ಅಗತ್ಯ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಬಹುದು.”
ಫೆಸಿಫಿಕ್ ತೀರದ ಚಿಕ್ಕ ದೇಶಗಳು ಹಾಗೂ ಮತ್ತಿತರ ಒಕ್ಕೂಟಗಳ ಜತೆ ಸೇರಿ ಭಾರತವು ಅದಾಗಲೇ ಈ ದೇಶಗಳಲ್ಲಿ ಸೌರಫಲಗಳನ್ನು ಸ್ಥಾಪಿಸುವಂಥ ಕೆಲಸಗಳಿಗೆ ಸಹಯೋಗ ಒದಗಿಸಿದೆ ಎಂದಿದ್ದಾರೆ ಪ್ರಧಾನಿ ಮೋದಿ.
“ಈಗಿನ್ನೂ ಅಭಿವೃದ್ಧಿಪಥವನ್ನು ಅನುಸರಿಸುತ್ತಿರುವ ದ್ವೀಪ ರಾಷ್ಟ್ರಗಳಿಗೆ ಹವಾಮಾನ ಬದಲಾವಣೆಯೇ ದೊಡ್ಡ ಸವಾಲಾಗಲಿದೆ. ಅವುಗಳಿಗೆ ಹವಾಮಾನ ಬದಲಾವಣೆ ಎನ್ನುವುದು ಜೀವನ್ಮರಣದ ಸಮಸ್ಯೆಯಾಗಲಿದೆ. ಇಂತಹ ರಾಷ್ಟ್ರಗಳಿಗಾಗಿ ಐರಿಸ್ ಕೇವಲ ಮೂಲ ಸೌಕರ್ಯವಾಗದೆ ಮಾನವ ಕಲ್ಯಾಣಕ್ಕಾಗಿ ಸಹಕಾರಿಯಾಗಲಿದೆ.” ಎಂದಿದ್ದಾರೆ ಪ್ರಧಾನಿ ಮೋದಿ.
ಐರಿಸ್ ರಚನೆಯನ್ನು ಮಾರಿಷಸ್ ಮುಕ್ತಕಂಠದಿಂದ ಸ್ವಾಗತಿಸಿದೆ. ಹವಾಮಾನ ವೈಪರೀತ್ಯದಿಂದ ನಿರಂತರ ನೋವುಣ್ಣುತ್ತಿರುವ ದೇಶ ನಮ್ಮದು ಎಂದಿದ್ದಾರೆ ಆ ದೇಶದ ಪ್ರಧಾನಿ ಪ್ರವಿಂದ ಕುಮಾರ್.
ಫಿಜಿ, ಜಮೈಕಾ ಸೇರಿದಂತೆ ಸುಮಾರು ನೂರು ದೇಶಗಳು ಐರಿಸ್ ಉದ್ಘಾಟನೆ ವೇಳೆ ಹಾಜರಿದ್ದವು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!