ಸಿನಿಮಾಗಳಿಂದ ದೂರ ಉಳಿಯಲಿದ್ದಾರಾ ಆಮೀರ್ ಖಾನ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಸಿನಿಮಾಗಳಿಂದಲೇ ದೂರ ಉಳಿಯುವ ಮಾತನಾಡಿದ್ದಾರೆ.
ಆಮೀರ್ ಅಭಿನಯದ ಬಹುನಿರೀಕ್ಷಿತ ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೊಲು ಅನುಭವಿಸಿದ್ದು, ಪ್ರೇಕ್ಷಕರು ಸಿನಿಮಾ ಒಪ್ಪಲಿಲ್ಲ. ಆಮೀರ್ ಇನ್ನೆಂಥ ಸಿನಿಮಾ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋಲು ಆಮೀರ್ ನಿದ್ದೆಗೆಡಿಸಿದೆ. ಹೀಗಾಗಿ ಇನ್ಮುಂದೆ ಸಿನಿಮಾಗಳನ್ನೇ ಮಾಡೋದಿಲ್ಲ ಎಂದು ಆಮೀರ್ ಹೇಳಿದ್ದಾರೆ. ಸಿನಿಮಾದಲ್ಲಿ ಆಮೀರ್ ನಟನೆ ಅದ್ಭುತವಾಗಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ಸ್ವಲ್ಪವೂ ಹಣಗಳಿಸಿಲ್ಲ. ಸ್ವಲ್ಪ ದಿನ ಸಿನಿಮಾ ರಂಗದಿಂದ ದೂರ ಉಳಿಯುವ ಬಗ್ಗೆ ಆಮೀರ್ ಯೋಚಿಸಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!