spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹಸೆಮಣೆ ಏರುವ ಸಿದ್ಧತೆಯಲ್ಲಿದ್ದಾರೆ ನಟಿ ರಕುಲ್ ಪ್ರೀತ್ ಸಿಂಗ್!

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ಸಖತ್ ಬೇಡಿಕೆ ಇರುವ ನಟಿ ರಕುಲ್ ಪ್ರೀತ್ ಸಿಂಗ್ ಇದೀಗ ತಮ್ಮ ಮದುವೆಯ ಬ್ಯುಸಿಯಲ್ಲಿದ್ದಾರಂತೆ.
ಹೌದು.. ನಟಿ ರಕುಲ್ ಪ್ರೀತ್ ಸಿಂಗ್ ಹಾಗೂ ನಟ ಜ್ಯಾಕಿ ಭಗ್ನಾನಿ ತಮ್ಮ ಲವ್ ಸ್ಟೋರಿಯನ್ನು ಬಹಿರಂಗಪಡಿಸಿದ್ದು, ಮುಂದಿನ ದಿನಗಳಲ್ಲಿ ಮದುವೆ ತಯಾರಿಯೂ ಆರಂಭವಾಗಲಿದೆ ಎಂದು ಗಾಸಿಪ್ ಹರಿದಾಡುತ್ತಿದೆ.
ಪ್ರೀತಿಯಲ್ಲಿ ತೇಲುತ್ತಿರುವ ಈ ಲವ್ ಬರ್ಡ್ಸ್ ಮದುವೆಗೆ ಕುಟುಂಬಸ್ಥರು ಒಪ್ಪಿಗೆ ಕೊಟ್ಟಿದ್ದು, ಆದಷ್ಟು ಬೇಗ ಹಸೆಮಣೆ ಏರಲಿದ್ದಾರಂತೆ. ಇಬ್ಬರೂ ಕೂಡ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ ಎಂದು ಬಾಲಿವುಡ್ ಮಂದಿ ಹೇಳಿತ್ತಿದ್ದಾರೆ ಆದರೆ ಈ ಬಗ್ಗೆ ರಕುಲ್ ಹಾಗೂ ಜ್ಯಾಕಿ ಯಾವುದೇ ಖಚಿತ ಮಾಹಿತಿ ನೀಡಿಲ್ಲ.
ಇತ್ತೀಚೆಗಷ್ಟೆ ತಮ್ಮ ಬರ್ಥ್ ಡೇ ಆಚರಿಸಿಕೊಂಡ ರಕುಲ್ ಗೆ ಪ್ರಿಯತಮ ಜ್ಯಾಕಿ ಭಗ್ನಾನಿ ಪ್ರೀತಿಯಿಂದ ಶುಭಾಶಯ ತಿಳಿಸಿದ್ದು, ನೀನಿಲ್ಲದ ದಿನಗಳು ಎಂದಿನಂತೆ ಇರುವುದಿಲ್ಲ. ನೀ ಜೊತೆ ಇರದೇ ಎಂಥಹ ತಿನಿಸು ಕೂಡ ರುಚಿಯಾಗಿರುವುದಿಲ್ಲ. ನನ್ನ ಪಾಲಿನ ಜಗತ್ತು, ನನ್ನ ಪ್ರಿಯತಮೆಗೆ ಹುಟ್ಟುಹಬ್ಬದ ಶುಭಾಶಯ ಎಂದು ಬರೆದುಕೊಂಡಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss