ಭಾರತೀಯ ರೈತರ ಆತಂಕಕ್ಕೆ ಅಮೆರಿಕ ಮದ್ದು? ವ್ಯಾಪಾರ ಒಪ್ಪಂದದ ಫ್ಯಾಕ್ಟ್ ಶೀಟ್‌ನಲ್ಲಿ ಬದಲಾವಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಕುರಿತು ಕಳೆದ ಕೆಲವು ದಿನಗಳಿಂದ ಎದ್ದಿದ್ದ ಆತಂಕದ ಮೋಡಗಳು ಸ್ವಲ್ಪಮಟ್ಟಿಗೆ ತಿಳಿಯಾಗಿವೆ. ಭಾರತದ ಕೃಷಿ ಕ್ಷೇತ್ರವನ್ನು ಅಮೆರಿಕಕ್ಕೆ ಅಡವಿಡಲಾಗುತ್ತಿದೆ ಎಂಬ ರೈತ ಸಂಘಟನೆಗಳ ಗಂಭೀರ ಆರೋಪದ ಬೆನ್ನಲ್ಲೇ, ಅಮೆರಿಕ ಸರ್ಕಾರವು ತನ್ನ ಅಧಿಕೃತ ‘ಫ್ಯಾಕ್ಟ್ ಶೀಟ್’ನಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಭಾರತದ ಆಕ್ಷೇಪ ಮತ್ತು ರೈತರ ಪ್ರತಿಭಟನೆಯ ಬಿಸಿಯೋ ಎಂಬಂತೆ, ಅಮೆರಿಕವು ಈ ಹಿಂದೆ ಪ್ರಕಟಿಸಿದ್ದ ನಿಯಮಗಳಲ್ಲಿನ ಕೆಲವು ಗೊಂದಲಕಾರಿ ಪದಗಳನ್ನು ಸದ್ದಿಲ್ಲದೆ ತೆಗೆದುಹಾಕಿದೆ. … Continue reading ಭಾರತೀಯ ರೈತರ ಆತಂಕಕ್ಕೆ ಅಮೆರಿಕ ಮದ್ದು? ವ್ಯಾಪಾರ ಒಪ್ಪಂದದ ಫ್ಯಾಕ್ಟ್ ಶೀಟ್‌ನಲ್ಲಿ ಬದಲಾವಣೆ!