ಮನೆಗೆ ಯಾರೇ ಬಂದರೂ ಮೊದಲು ನೊಟೀಸ್ ಮಾಡೋದು ಬಾತ್‌ರೂಮನ್ನು. ಮನೆ ಎಷ್ಟೇ ಕ್ಲೀನ್ ಆಗಿರಲಿ ಬಾತ್‌ರೂಮ್ ವಾಸನೆ ಇದ್ರೆ ಮುಜುಗರ ಆಗುತ್ತದೆ. ವಾರಕ್ಕೊಮ್ಮೆ ಕ್ಲೀನ್ ಮಾಡಿದ್ರೂ ಬಾತ್‌ರೂಮ್ ಗಬ್ಬು ಅನಿಸ್ತಿದ್ಯಾ? ಈ ಟಿಪ್ಸ್ ಫಾಲೋ ಮಾಡಿ..
ಮೊದಲು ಬಾತ್ರೂಮ್ ನಲ್ಲಿರುವ ಬಾಗಿಲು, ಕಿಟಕಿಗಳನ್ನು ಒರೆಸಬೇಕು. ನಂತರ ವಾಶ್ ಬೇಸಿನ್ ನಲ್ಲಿರುವ ಕನ್ನಡಿಯನ್ನು ಬಟ್ಟೆಯಿಂದ ಒರೆಸಿ.
ಒಂದು ಬಕೆಟ್ ನಲ್ಲಿ ಬಿಸಿ ನೀರು ಹಾಕಿ ಅದಕ್ಕೆ ನಿಂಬೆರಸ ಬೆರೆಸಿ ಆ ನೀರಿನಿಂದ ಬಾತ್ರೂಮ್ ನ ನೆಲವನ್ನು ಒರೆಸಿ. ಇದರಿಂದ ಬಾತ್ರೂಮ್ ನಲ್ಲಿರುವ ಬೂಷ್ಟು ಮತ್ತು ಬ್ಯಾಕ್ಟೀರಿಯಾಗಳು ಸುಲಭವಾಗಿ ನಿವಾರಣೆಯಾಗುತ್ತವೆ.
ನೆಲವನ್ನು ಸ್ವಚ್ಛಗೊಳಿಸಲು ಬಿಸಿ ನೀರಿನಲ್ಲಿ ಬ್ಲೀಚಿಂಗ್ ಪೌಡರ್ ಬೆರೆಸಿ ನಂತರ ಆ ನೀರಿನಿಂದ ಬಾತ್ರೂಮ್ ನೆಲವನ್ನು ಒರೆಸಬೇಕು. ಹೀಗೆ ಮಾಡಿದರೆ ಬಾತ್ರೂಮ್ ನೆಲದಲ್ಲಿರುವ ಕಪ್ಪು, ಕೊಳೆ ಮತ್ತು ದುರ್ವಾಸನೆ ನಿವಾರಣೆಯಾಗುತ್ತದೆ.
ರೂಮ್ ಫ್ರೆಶ್ನರ್ ಬಳಸಬಹುದು. ಇದರಿಂದ ಬಾತ್ರೂಮ್ ಸುವಾಸನೆ ಬೀರುತ್ತದೆ. ಮೂರು ಅಥವಾ ನಾಲ್ಕು ದಿನಗಳಿಗೊಮ್ಮೆ ಹೀಗೆ ಮಾಡಬೇಕು.
ಬೇಕಿಂಗ್ ಸೋಡಾ ಬಳಸಬಹುದು. ಇದಕ್ಕಾಗಿ ಬೇಕಿಂಗ್ ಸೋಡಾವನ್ನು ಬಾತ್ರೂಮ್ ನ ಎಲ್ಲಾ ಕಡೆ ಸಿಂಪಡಿಸಬೇಕು. ನಂತರ ಬಿಸಿ ನೀರಿನಿಂದ ಸ್ವಚ್ಛಗೊಳಿಸಬೇಕು. ಹೀಗೆ ಮಾಡಿದರೆ ಬಾತ್ರೂಮ್ ದುರ್ವಾಸನೆ ನಿವಾರಣೆಯಾಗಿ, ಹೊಳಪು ಬರುತ್ತದೆ.
ಶೌಚಾಲಯ ಮತ್ತು ಸ್ನಾನಗೃಹದಲ್ಲಿ ಕೆಲವು ಹನಿ ಲ್ಯಾವೆಂಡರ್ ಎಣ್ಣೆಯನ್ನು ನೀರಿನಲ್ಲಿ ಬೆರೆಸಿ ಸ್ವಚ್ಛಗೊಳಿಸಬೇಕು. ಹೀಗೆ ಮಾಡಿದರೆ ದುರ್ವಾಸನೆ ನಿವಾರಣೆಯಾಗಿ ಸುವಾಸನೆ ಬರುತ್ತದೆ.