ಕೆಮ್ಮಿದ್ದೇ ಅಪರಾಧವಾಯ್ತೇ? ನೆರೆಮನೆಯವರ ಅಟ್ಟಹಾಸಕ್ಕೆ ವಲಸೆ ಕಾರ್ಮಿಕ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇವಲ ‘ಕೆಮ್ಮಿದ’ ಎಂಬ ಸಣ್ಣ ವಿಷಯಕ್ಕೆ ಶುರುವಾದ ಜಗಳವೊಂದು ವಿಕೋಪಕ್ಕೆ ತಿರುಗಿ, ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ರಾಮನಗರ ತಾಲೂಕಿನ ಬಿಡದಿಯಲ್ಲಿ ನಡೆದಿದೆ. ರಾಜಸ್ಥಾನ ಮೂಲದ ವಿನೋದ್ ಕುಮಾರ್ ಶೈನಿ (34) ಕಳೆದ 11 ವರ್ಷಗಳಿಂದ ಬಿಡದಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಮೂರು ದಿನಗಳ ಹಿಂದೆ ವಿನೋದ್ ಅವರು ಮನೆಯ ಮುಂದೆ ಕೆಮ್ಮಿದ ವಿಷಯಕ್ಕೆ ನೆರೆಹೊರೆಯವರಾದ ಸಂಜಯ್ ಎಂಬುವವರ ಜೊತೆ ಮಾತಿನ ಚಕಮಕಿ ನಡೆದಿದೆ. ಈ ಸಣ್ಣ ಜಗಳ … Continue reading ಕೆಮ್ಮಿದ್ದೇ ಅಪರಾಧವಾಯ್ತೇ? ನೆರೆಮನೆಯವರ ಅಟ್ಟಹಾಸಕ್ಕೆ ವಲಸೆ ಕಾರ್ಮಿಕ ಬಲಿ