Thursday, July 7, 2022

Latest Posts

ಬೆಳ್ಳುಳ್ಳಿ ಸಿಪ್ಪೆ ಬಿಡಿಸೋದಕ್ಕೆ ಕಷ್ಟಪಡ್ತೀರಾ? ಹಾಗಿದ್ರೆ ಈ ಟಿಪ್ಸ್ ಟ್ರೈ ಮಾಡಿ..

ಬೆಳ್ಳುಳ್ಳಿ ಸಿಪ್ಪೆ ಬಿಡಿಸುವುದು ಎಲ್ಲರಿಗೂ ಬೋರಿಂಗ್ ಕೆಲಸ. ಬಹಳಷ್ಟು ಜನ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅವರಿಗೆ ಈ ಬೆಳ್ಳುಳ್ಳಿ ಸಿಪ್ಪೆ ಬಿಡಿಸುವ ಕೆಲಸ ಕೊಡುತ್ತಾರೆ. ಈಸಿಯಾಗಿ ಕೂಡ ಸಿಪ್ಪೆಗಳನ್ನು ತೆಗೆಯಬಹುದು. ಇಲ್ಲಿ ಕೆಲವೊಂದಿಷ್ಟು ಟಿಪ್ಸ್ ಇದೆ ಟ್ರೈ ಮಾಡಿ…

  • ಬೆಳ್ಳುಳ್ಳಿ ಇಳಕಗಳನ್ನು ಬೇರೆ-ಬೇರೆ ಮಾಡಿಕೊಂಡು ಅದಕ್ಕೆ ಬಿಸಿ ನೀರನ್ನು ಹಾಕಿ 2 ನಿಮಿಷ ಬಿಡಿ. ನಂತರ ಈಸಿಯಾಗಿ ಸಿಪ್ಪೆ ಬಿಡಿಸಬಹುದಾಗಿ.
  • ಬೆಳ್ಳುಳ್ಳಿಯ ಇಳಕಗಳನ್ನು ಬೇರೆ ಮಾಡಿಕೊಂಡು ನಂತರ ಅದನ್ನು ಚಪಾತಿ ಸುಡುವ ಹೆಂಚಿನ ಮೇಲೆ 3 ನಿಮಿಷ ಬಿಸಿ ಮಾಡಿದರೆ ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆ ತೆಗೆಯಬಹುದಾಗಿ.
  • ಫ್ರೀ ಟೈಮ್ ನಲ್ಲಿ ಬೆಳ್ಳುಳ್ಳಿ ಸಿಪ್ಪೆ ತೆಗೆದು ಫ್ರಿಡ್ಜ್ ಲ್ಲಿ ಶೇಖರಿಸಿಕೊಳ್ಳಿ. ಬೇಕಾದಾಗ ಬಳಸಿ.
  • ಬೆಳ್ಳುಳ್ಳಿಯ ಇಳಕಗಳನ್ನು ಬೇರೆ ಮಾಡಿಕೊಂಡು ಓವನ್ ನಲ್ಲಿ 30 ಸೆಕೆಂಡ್ ಇಡಿ. ನಂತರ ತೆಗೆದು ಕೈಯಿಂದ ಉಜ್ಜಿದರೆ ಸಿಪ್ಪೆ ಸುಲಭವಾಗಿ ಬಿಟ್ಟು ಹೋಗುತ್ತದೆ.
  • ಬೆಳ್ಳುಳ್ಳಿ ಇಳಕಗಳನ್ನು ಬಿಡಿಸಿಕೊಂಡು ಅದನ್ನು ಜಜ್ಜಿ. ಆಗ ಸಿಪ್ಪೆ ಬೇರೆಯಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss