ಚಳಿಗಾಲದಲ್ಲಿ ಮಕ್ಕಳಿಗೆ ಈ ಆಹಾರಗಳನ್ನು ನೀಡುವುದು ಆರೋಗ್ಯಕರವಲ್ಲ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇನ್ನೇನು ಚಳಿಗಾಲ ಬರುತ್ತಿದೆ. ದೀಪಾವಳಿ ಹಬ್ಬದ ನಂತರ ಚಳಿ ಕ್ರಮೇಣ ಹೆಚ್ಚುತ್ತದೆ. ಈ ಅವಧಿಯು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ಮಕ್ಕಳು ಕೆಮ್ಮು, ನೆಗಡಿ, ಅಸ್ತಮಾದ ಜೊತೆಗೆ ಚರ್ಮ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಾರೆ ಹಾಗಾಗಿ ಚಳಿಗಾಲದಲ್ಲಿ ಮಕ್ಕಳಿಗೆ ನೀಡುವ ಆಹಾರದ ಬಗ್ಗೆ ಜಾಗರೂಕರಾಗಿರುವುದು ಅತ್ಯಗತ್ಯ.

ಚಳಿಗಾಲದಲ್ಲಿ ಡೈರಿ ಉತ್ಪನ್ನಗಳಿಗೆ ಹೇಳಿ ಗುಡ್‌ ಬೈ;  ಚಳಿಗಾಲದಲ್ಲಿ ಡೈರಿ ಉತ್ಪನ್ನಗಳಿಂದ ದೂರವಿರುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಈ ಉತ್ಪನ್ನಗಳು ಮೂಗು ಕಟ್ಟುವಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಚಳಿಗಾಲದಲ್ಲಿ ಉಸಿರಾಟದ ತೊಂದರೆಗೆ ಕಾರಣವಾಗುವ ಇಂತಹ ಆಹಾರಗಳನ್ನು ಮಕ್ಕಳಿಗೆ ನೀಡದಿರುವುದು ಉತ್ತಮ.

ಸಕ್ಕರೆಯಲ್ಲಿ ಹೆಚ್ಚಿಗಿರುವ ಆಹಾರವನ್ನು ತಪ್ಪಿಸಿ;  ಮಿಠಾಯಿಗ, ಕೇಕ್‌, ತಂಪು ಪಾನೀಯ ಮತ್ತು ಐಸ್‌ಕ್ರೀಮ್‌ ಅಂದರೆ ಮಕ್ಕಳಿಗೆ ಹುಚ್ಚು. ಇವುಗಳ ಸೇವನೆ ಸೋಂಕುಗಳ ವಿರುದ್ಧ ಹೋರಾಡುವ ದೇಹದಲ್ಲಿನ ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಹಾಗಾಗಿ ಇವುಗಳಿಂದ ಮಕ್ಕಳನ್ನು ದೂರವಿಟ್ಟಷ್ಟೂ ಅವರ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ನೆನಪಿನಲ್ಲಿಡಬೇಕು.

ಮಿತವಾಗಿ ಮಾಂಸವನ್ನು ತಿನ್ನುವುದು ಉತ್ತಮ;  ಸಂಸ್ಕರಿಸಿದ ಮಾಂಸ ಮತ್ತು ಮೊಟ್ಟೆಗಳನ್ನು ಮಕ್ಕಳಿಗೆ ನೀಡದಿರಿ. ಬ ನಿಮ್ಮ ಮಕ್ಕಳಿಗೆ ಮಾಂಸವನ್ನು ನೀಡಲು ಬಯಸಿದರೆ, ಕೋಳಿ ಮತ್ತು ಮೇಕೆಗಳಂತಹ ಸಾವಯವವಾಗಿ ಬೆಳೆದ ಮಾಂಸವನ್ನು ಅವರಿಗೆ ನೀಡುವುದು ಉತ್ತಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!