ಪ್ರೆಗ್ನೆನ್ಸಿ ಸಮಯದಲ್ಲಿ ಲೈಂಗಿಕ ಕ್ರಿಯೆ ರಿಸ್ಕಿ ಅನಿಸುತ್ತದೆ. ಅದರಲ್ಲೂ ಹಲವರಿಗೆ ಪ್ರೆಗ್ನೆನ್ಸಿ ಸಮಯದಲ್ಲಿ ಸೆಕ್ಸ್ ಮಾಡಬಹುದಾ ಎನ್ನುವ ಮಾಹಿತಿ ಕೂಡ ಇಲ್ಲ. ಸೇಫ್ ಸೆಕ್ಸ್ ಖಂಡಿತಾ ಸಾಧ್ಯ. ಆದರೆ ಮೊದಲಿಗಿಂತಲೂ ನೀವು ಹುಷಾರಾಗಿರೋದು ಒಳ್ಳೆಯದು. ಮಹಿಳೆಯರಿಗೆ ಮೂಡ್ ಸ್ವಿಂಗ್ಸ್ ಹೆಚ್ಚಿರುವ ಕಾರಣ ಸಂಗಾತಿ ಜೊತೆ ಮಾತನಾಡಿ, ಅವರಿಗೇನು ಬೇಕು ಎಂದು ಕೇಳಿ ಮುಂದುವರಿಯೋದು ಬೆಟರ್. ಇನ್ನು ನಿಮ್ಮ ಮಗುವಿಗೆ ಏನೂ ಆಗದಂತೆ ಸೆಕ್ಸ್ ಮಾಡುವ ಬಗ್ಗೆ ವೈದ್ಯರ ಜೊತೆ ಒಮ್ಮೆ ಚರ್ಚೆ ಮಾಡಿ.
ಪ್ರೆಗ್ನೆನ್ಸಿ ವೇಳೆ ಸೆಕ್ಸ್ ಮಾಡೋದ್ರಿಂದ ಆಗುವ ಉಪಯೋಗಗಳಿವು..
- ಬಾಂಧವ್ಯ ಬೆಳೆಸಿ: ಗಂಡ, ಹೆಂಡತಿ ನಡುವಿನ ಬಾಂಧವ್ಯ ಈ ವೇಳೆ ತುಂಬಾನೇ ಸೂಕ್ಷ್ಮ. ಈ ರೀತಿ ಇರುವಾಗ ಸೆಕ್ಸ್ ನಿಮ್ಮ ಬಾಂಧವ್ಯ ಹೆಚ್ಚಿಸೋಕೆ ತುಂಬಾನೇ ಸಹಾಯ ಮಾಡುತ್ತದೆ.
- ದೇಹದ ಆರೋಗ್ಯ: 30 ನಿಮಿಷದ ಸೆಕ್ಸ್ ರೊಟೀನ್ ದೇಹದ ಆರೋಗ್ಯ ಹೆಚ್ಚಿಸುತ್ತದೆ. ಒಂದು ಬಾರಿ ಸೆಕ್ಸ್ನಿಂದ 50ಕ್ಕೂ ಹೆಚ್ಚು ಕ್ಯಾಲೊರಿ ಬರ್ನ್ ಆಗುತ್ತದೆ. ಜೊತೆಗೆ ಬ್ಲಡ್ ಪ್ರೆಶರ್ ಕೂಡ ಕಡಿಮೆ ಆಗುತ್ತದೆ.
- ನೋವು ದೂರ: ಪ್ರೆಗ್ನೆನ್ಸಿಗೆ ಸಂಬಂಧಿಸಿದ ನೋವುಗಳಿಂದ ಸೆಕ್ಸ್ ನಿಮ್ಮನ್ನು ದೂರ ಇಡಿಸುತ್ತದೆ. ಆರ್ಗಾಸಮ್ ವೇಳೆ ಆಕ್ಸಿಟೋಸಿನ್ ಹಾರ್ಮೋನ್ ರಿಲೀಸ್ ಆಗುವುದರಿಂದ ಇದು ನೋವನ್ನು ತಡೆದುಕೊಳ್ಳುವ ಶಕ್ತಿ ಹೆಚ್ಚಿಸುತ್ತದೆ.
- ನಿದ್ದೆ ಮಾಡಿ: ಚೆನ್ನಾಗಿ ನಿದ್ದೆ ಮಾಡಲು ಸೆಕ್ಸ್ ಸಹಕಾರಿ. ರಿಲ್ಯಾಕ್ಸ್ ಆಗಿ ಮಲಗಬಹುದು. ಇನ್ನು ಒಳ್ಳೆಯ ಹಾರ್ಮೋನ್ಸ್ ಉತ್ಪತ್ತಿ ಮಾಡೋದಕ್ಕೂ ಇದು ಸಹಕಾರಿ.
- ಮೂಡ್ ಸ್ವಿಂಗ್ಸ್: ಒಂದು ನಿಮಿಷ ಗಂಡನನ್ನು ಪ್ರೀತಿಸಿಯಿಂದ ಮಾತನಾಡಿಸಿ, ಎರಡನೇ ನಿಮಿಷಕ್ಕೆ ಬೈಯಬಹುದು. ಇದೆಲ್ಲವೂ ನಿಮ್ಮ ಹೆಂಡತಿ ಮಾಡ್ತಿರೋದಲ್ಲ, ಹಾರ್ಮೋನ್ಸ್ ಮಾಡ್ತಿರುವ ಕೆಲಸ. ಖುಷಿ,ಪ್ರೀತಿ, ಆನಂದದ ಹಾರ್ಮೋನ್ ಡೆವಲಪ್ ಆಗಲು ಸೆಕ್ಸ್ ಬೇಕೇ ಬೇಕು.
ನಿಮ್ಮ ಪ್ರೆಗ್ನೆನ್ಸಿಯಲ್ಲಿ ಈ ಸಮಸ್ಯೆಗಳಿದ್ದರೆ ಸೆಕ್ಸ್ ಮಾಡದಿರುವುದೇ ಒಳ್ಳೆಯದು..
- ನಿಮಗೆ ಈಗಾಗಲೇ ಒಂದು ಬಾರಿ ಗರ್ಭಪಾತ ಆಗಿದ್ದರೆ. ಅಥವಾ ನಿಮ್ಮ ವೈದ್ಯರು ಗರ್ಭಪಾತ ಆಗುವ ಸಾಧ್ಯತೆಗಳಿವೆ ಎಂದು ಹೇಳಿದ್ದರೆ.
- ಪ್ರೀಟರ್ಮ್ ಲೇಬರ್ ಆಗುವ ಸಾಧ್ಯತೆ ಇದ್ದರೆ.
- ನಿಮಗೆ ಗೊತ್ತೇ ಇಲ್ಲದೆ ವಜೈನಲ್ ಡಿಸ್ಚಾರ್ಜ್, ಬ್ಲೀಡಿಂಗ್ ಆಗುತ್ತಿದ್ದರೆ ಸೆಕ್ಸ್ ಸೇಫ್ ಅಲ್ಲ.
- ಟ್ವಿನ್ಸ್ ಅಥವಾ ಟ್ರಿಪ್ಲೆಟ್ಸ್ಗಳನ್ನು ಎಕ್ಸ್ಪೆಕ್ಟ್ ಮಾಡುತ್ತಿದ್ದರೆ ರಿಸ್ಕ್ ಬೇಡ.
- ಯಾವುದೇ ಕಾಂಪ್ಲಿಕೇಶನ್ ಇದ್ದು, ವೈದ್ಯರು ಲೈಂಗಿಕ ಕ್ರಿಯೆ ಬೇಡ ಎಂದಿದ್ದರೆ ಅದನ್ನು ಫಾಲೋ ಮಾಡಿ.