Wednesday, August 10, 2022

Latest Posts

ಊಟ ಮಾಡುವುದಕ್ಕೂ ಸಮಯವಿಲ್ಲದಷ್ಟು ಕೆಲಸವೇ? ಎಷ್ಟೇ ಗಡಿಬಿಡಿ ಇದ್ದರೂ ಊಟ ಮಾಡುವಾಗ ಇವುಗಳನ್ನು ಮರೆಯಬೇಡಿ!!

ಕೆಲಸ, ಮನೆ, ಹಣ, ಕುಟುಂಬ ಅದು, ಇದು ಅಂಥ ನಮ್ಮ ಬದುಕಲ್ಲಿ ನೆಮ್ಮದಿಯೇ ಇರುವುದಿಲ್ಲ. ಬಹಳ ಬ್ಯೂಸಿ ಲೈಫ್’ಲ್ಲಿ ಇದ್ದೇವೆ. ಎಷ್ಟು ಬ್ಯೂಸಿ ಎಂದರೆ ಊಟ ಮಾಡುವುದಕ್ಕೂ ಸಮಯವಿಲ್ಲ. ಗಡಿಬಿಡಿಯಲ್ಲಿಯೇ ಒಂದು ಶಿಸ್ತಿಲ್ಲದೇ ಊಟ, ತಿಂಡಿ ಮಾಡಿಕೊಂಡು ಹೋಗುತ್ತೇವೆ. ಆದರೆ ಹೀಗೆ ಮಾಡುವುದು ದೊಡ್ಡ ತಪ್ಪು. ಏಕೆಂದರೆ ಈ ರೀತಿಯಾಗಿ ಊಟ ಮಾಡಿದರೆ ಅದು ನಮ್ಮ ದೇಹಕ್ಕೆ ಒಳಿತು ಮಾಡುವುದಿಲ್ಲಿ. ನಮ್ಮ ಒತ್ತಡದ ಬದುಕಿನಲ್ಲಿಯೂ ನಾವು ಯಾವ ರೀತಿಯಾಗಿ ಊಟ ಮಾಡಬೇಕು ಎಂಬುದು ಇಲ್ಲಿದೆ ಓದಿ..

ಕುಳಿತೇ ಊಟ ಮಾಡಿ:
ಎಷ್ಟೇ ಒತ್ತಡವಿದ್ದರೂ ಕುಳಿತು ಊಟ ಮಾಡಿ. ಏಕೆಂದರೆ ನೀವು ಕುಳಿತು ತಿಂದರೆ  ಅದು ನಿಧಾನವಾಗಿ ಜೀರ್ಣಕ್ರೀಯೆ ಪ್ರಾರಂಭಿಸುತ್ತದೆ. ನಿಂತು ತಿಂದರೆ  ಒಂದೇ ಕ್ಷಣ ಜೀರ್ಣಕ್ರಿಯೆಗೆ ಒತ್ತಡ ಬೀಳುತ್ತದೆ. ನಿಂತು ತಿನ್ನುವುದರಿಂದ ಜೀರ್ಣ ಶಕ್ತಿ ಬೇಗ ಡ್ಯಾಮೇಜ್ ಆಗುತ್ತದೆ.

ಊಟ ಮಾಡುವಾಗ ನೀರು ಸೇವಿಸಬೇಡಿ:
ಊಟ ಮಾಡುವಾಗ ಎಂದಿಗೂ ನೀರನ್ನು ಸೇವಿಸಬೇಡಿ.  ಊಟಕ್ಕೆ 10 ನಿಮಿಷ ಮೊದಲು ನೀರನ್ನು ಸೇವಿಸಬಹುದು ಅಥವಾ ಊಟ ಆದ 10 ನಿಮಿಷ ನಂತರ ನೀರನ್ನು ಸೇವಿಸಬಹುದು. ಊಟದ ಜೊತೆ ನೀರನ್ನು ಸೇವಿಸಿದರೆ ಎಸಿಡಿಟಿ ಸಮಸ್ಯೆ ಉಂಟಾಗುತ್ತದೆ.

ಹೆಚ್ಚು ತಿನ್ನಬೇಡಿ:
ಅಗತ್ಯಕ್ಕಿಂತ ಹೆಚ್ಚು ತಿನ್ನಬೇಡಿ. ನಿಮ್ಮ ಹೊಟ್ಟೆಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ತಿನ್ನಿ. ಹೊಟ್ಟೆ ತುಂಬಿದ ಮೇಲೂ ತಿನ್ನಬೇಡಿ. ಒತ್ತಡದಲ್ಲಿದ್ದಾಗ, ಟೆನ್ಶನಲ್ಲಿ ಇದ್ದಾಗ  ತಿಂದಿದ್ದು ಗೊತ್ತಾಗುವುದೇ ಇಲ್ಲೆ ಒಂದು ಫ್ಲೋನಲ್ಲಿ ತಿನ್ನುತ್ತಿರುತ್ತೇವೆ. ಆದರೆ ಹಾಗೇ ತಿನ್ನುವುದು ತಪ್ಪು. ಅಗತ್ಯಕ್ಕೆ ಬೇಕಷ್ಟೆ ತಿನ್ನಿ.

ನಿಧಾನವಾಗಿ ಸೇವಿಸಿ:
ನಾವು ಸೇವಿಸುವ ಆಹಾರವನ್ನು ಗಡಿಬಿಡಿಯಿಂದ ಸೇವಿಸಿದೆ ನಿಧಾನವಾಗಿ, ಒಂದೆಡೆ ಕುಳಿತು ಸೇವಿಸಿದರೆ ಉತ್ತಮವಾಗಿ ಜೀರ್ಣವಾಗಿ,ಆಹಾರದಲ್ಲಿರುವ ಪೋಷಕಾಂಶಗಳು ರಕ್ತದ ಮುಖಾಂತರ ಅಂಗಾಂಗಗಳಿಗೆ ತಲುಪಿ ಅದರ ಕಾರ್ಯ ನಿರ್ವಹಿಸುವಲ್ಲಿ ಯಶಸ್ವಿತಾಗುತ್ತದೆ.

ತರಕಾರಿ ಇರಲಿ:
ಊಟದಲ್ಲಿ ಆದಷ್ಟು ಕಡಿಮೆ ಕರಿದ ತಿಂಡಿ, ಸಿಹಿ ಪದಾರ್ಥಗಳಿರಲಿ. ಹೆಚ್ಚು ಹೆಚ್ಚು ಹಸಿ ತರಕಾರಿಗಳನ್ನು ಸೇವಿಸಿ. ಊಟದಲ್ಲಿ ಹಸಿ ಪದಾರ್ಥಗಳೇ ಇರಲಿ. ಈ ರೀತಿಯ ಊಟದಿಂದ ಆರೋಗ್ಯವಾಗಿರಬಹುದು.

ಮಜ್ಜಿಗೆ ಸೇವಿಸಿ:
ಊಟ ಆದ 10 ನಿಮಿಷದ ನಂತರ ಮಜ್ಜಿಗೆಯನ್ನು ಸೇವಿಸಿ. ಮಜ್ಜಿಗೆಗೆ ನೀರನ್ನು ಹಾಕಿ ತೆಳ್ಳಗಾಗಿಸಿಕೊಂಡು ಅದಕ್ಕೆ ಶುಂಠಿ ಹಾಕಿಕೊಂಡು ಸೇವಿಸಿದರೆ ತಿಂದ ಆಹಾರ ಜೀರ್ಣವಾಗುತ್ತದೆ. ಮತ್ತು  ಗ್ಯಾಸ್ ಆಗುವುದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss