ಮಲೈಕಾ ಅರೋರಾ ಪ್ರೆಗ್ನೆಂಟ್? ಅರ್ಜುನ್ ಕಪೂರ್ ಗರಂ ಆಗಿದ್ದು ಯಾಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಹಲವು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದಾರೆ. ಇದೀಗ ಇವರು ಮುದ್ದಾದ ಮಗುವಿನ ಪೋಷಕರಾಗುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿದ್ದು, ಅರ್ಜುನ್ ಕಪೂರ್ ಈ ಬಗ್ಗೆ ಮಾತನಾಡಿದ್ದಾರೆ.

Buzz: Actress Dating Arjun Kapoor Is Pregnant? - Movie Newsಮಲೈಕಾ ಪ್ರೆಗ್ನೆಂಟ್ ಅಲ್ಲ. ಬೇಕಂತಲೇ ಪರ್ಸನಲ್ ವಿಷಯಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಈ ಸುದ್ದಿ ಹಬ್ಬಿಸಿದ್ದು ಯಾರು ಎಂದು ನನಗೆ ತಿಳಿದಿದೆ. ಇನ್ನೆಷ್ಟು ಕೆಳಮಟ್ಟಕ್ಕೆ ಇಳಿಯಲು ಸಾಧ್ಯ? ನೀವು ಪತ್ರಕರ್ತೆಯಾಗಿರಬಹುದು ಸತ್ಯಾಸತ್ಯತೆ ತಿಳಿಯದೆ ಸುದ್ದಿ ಹರಡೋದು ಯಾಕೆ? ಸ್ವಲ್ಪವೂ ಸೂಕ್ಷ್ಮ ಏಕಿಲ್ಲ. ನಿಮ್ಮ ಕೆಲಸಕ್ಕೂ, ನಮ್ಮ ಖಾಸಗಿತನಕ್ಕೂ ನೀವು ಮರ್ಯಾದಿ ನೀಡುತ್ತಿಲ್ಲ.

Arjun Kapoor LASHES OUT at Malaika Arora FAKE pregnancy news, says 'don't  dare play with personal lives'- Malaika Arora Pregnant Newsನಮ್ಮ ಬಗ್ಗೆ ಇಲ್ಲಸಲ್ಲದ್ದು ಬರೆಯುತ್ತಿರುವುದು ಇದು ಮೊದಲೇನಲ್ಲ. ಇಷ್ಟು ದಿನ ಬಿಡು ಹೋಗಲಿ ಎಂದು ಸುಮ್ಮನಾಗಿದ್ದೆ. ಇನ್ನು ಹಾಗಾಗುವುದಿಲ್ಲ. ನಿಮ್ಮ ವೆಬ್‌ನಲ್ಲಿ ಈ ರೀತಿ ಸುದ್ದಿ ಹೆಸರಿನ ಕಸ ಹರಡುವುದುನ್ನು ನಿಲ್ಲಿಸಿ. ನಮ್ಮ ಜೀವನದ ಜೊತೆ ಆಟ ಆಡಿದರೆ ಚೆನ್ನಾಗಿರುವುದಿಲ್ಲ ಎಂದು ವಾರ್ನ್ ಮಾಡಿದ್ದಾರೆ.

Arjun Kapoor and Malaika Arora lash out at report claiming she is pregnant;  term it as “garbage news” : Bollywood News - Bollywood Hungamaಅಷ್ಟೇ ಅಲ್ಲದೆ ಕರ್ಮ ಯಾರನ್ನೂ ಬಿಡುವುದಿಲ್ಲ. ಇನ್ನೊಬ್ಬರಿಗೆ ನೋವು ಮಾಡಿದರೆ ಅದು ನಿಮ್ಮನ್ನು ಹುಡುಕಿ ಬರುತ್ತದೆ. ಹೆಚ್ಚು ನೋವು ಕೊಡುತ್ತದೆ. ಇನ್ನೊಬ್ಬರ ಜೀವನದ ಜೊತೆ ಆಟ ಆಡುವ ಮುನ್ನ ಇದನ್ನು ಗಮನದಲ್ಲಿಡಿ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!