Saturday, December 9, 2023

Latest Posts

ದೊಡ್ಮನೆಯಿಂದ ಹೊರಬಂದ ಸಾನ್ಯ ಅಯ್ಯರ್ ಮದುವೆನಾ?: ಈ ಕುರಿತು ನಟಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಬಿಗ್ ಬಾಸ್ ಮನೆಯಿಂದ ಹೊರಬಂದ ಪುಟ್ಟಗೌರಿಯಾಗಿ ಮನೆಮಾತಾಗಿದ್ದ ನಟಿ ಸಾನ್ಯ ಅಯ್ಯರ್ ದಿಡೀರ್ ಮಾಯವಾಗಿದ್ದರು. ಇದೀಗ ಇನ್ಸ್ಟಾಗ್ರಾಂ ಖಾತೆಯಲ್ಲಿ ಲೈವ್ ನಲ್ಲಿ ಪ್ರತ್ಯಕ್ಷ ವಾದ ಸಾನ್ಯ ಅಭಿಮಾನಿಗಳ ನಾನಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಸಾಕಷ್ಟು ಸೀರಿಯಲ್, ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದ ನಟಿ ಸಾನ್ಯ ಬಿಗ್ ಬಾಸ್ ಒಟಿಟಿಗೆ ಕಾಲಿಟ್ಟಿದ್ದರು. ಬಳಿಕ ಟಿವಿ ಬಿಗ್ ಬಾಸ್‌ನಲ್ಲೂ ಮೋಡಿ ಮಾಡಿದ್ದರು. ಇಲ್ಲಿ ಅವರ ಮತ್ತು ರೂಪೇಶ್ ಶೆಟ್ಟಿ ಗೆಳೆತನವು ಹೈಲೈಟ್ ಆಗಿತ್ತು. ಬಳಿಕ ಸಾನ್ಯ ಎಲಿಮಿನೇಟ್ ಆದ ವೇಳೆ ಮಾಧ್ಯಮ ಕಣ್ಣಿಗೂ ಬೀಳದೇ, ಸಂದರ್ಶನಕ್ಕೂ ಯಾವುದೇ ರಿಯಾಕ್ಷನ್ ಕೊಡದೇ ಫುಲ್ ಸೈಲೆಂಟ್ ಆಗಿದ್ದಾರೆ.

ಎಷ್ಟು ದಿನಗಳ ಬಳಿಕ ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಲೈವ್ ಬಂದಿದ್ದು,. ಈ ವೇಳೆ ಅಭಿಮಾನಿಯೊಬ್ಬರು ಬಿಗ್ ಬಾಸ್ ನಂತರ ಮುಂದೇನು ಮಾಡ್ತೀರಾ ಎಂದು ಕೇಳಿದ್ದಾರೆ. ಜೊತೆಗೆ ಮದುವೆ ಬಗ್ಗೆ ವಿಚಾರಿಸಿದ್ದಾರೆ. ಅದಕ್ಕೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ.

ದೊಡ್ಮನೆಯಿಂದ ಹೊರಬಂದ ಮೇಲೆ ಸಾಕಷ್ಟು ಕಥೆ ಕೇಳುತ್ತಿದ್ದೇನೆ. ಮುಂದೆ ನಾನು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಇನ್ನೂ ನನ್ನ ಮದುವೆಯ ಬಗ್ಗೆ ಸದ್ಯಕ್ಕೆ ಯಾವುದೇ ಪ್ಲ್ಯಾನ್ಸ್ ಇಲ್ಲಾ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!