Friday, July 1, 2022

Latest Posts

ಆಗಸ್ಟ್ ನಲ್ಲಿ ತುಂಬಾ ಬ್ಯಾಂಕ್ ಕೆಲಸಗಳಿವೆಯೇ? ಹಾಗಿದ್ರೆ ರಜಾ ದಿನಗಳ ಬಗ್ಗೆ ತಿಳಿದುಕೊಳ್ಳಿ..

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………..

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಭಾರತೀಯ ರಿಸರ್ವ್ ಬ್ಯಾಂಕ್ ಆಗಸ್ಟ್ ತಿಂಗಳ ಅಧಿಕೃತ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ವಾರಾತ್ಯಂದ ರಜೆಗಳು ಸೇರಿದಂತೆ ಆಗಸ್ಟ್ ನಲ್ಲಿ ದೇಶಾದ್ಯಂತದ ಬ್ಯಾಂಕುಗಳು ಒಟ್ಟು 15 ದಿನಗಳವರೆಗೆ ಮುಚ್ಚಲ್ಪಡುತ್ತವೆ. ಸಾಮಾನ್ಯವಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಹಬ್ಬಕ್ಕೆ ತಕ್ಕಂತೆ ರಜೆಗಳಲ್ಲಿ ಬದಲಾವಣೆಯಾಗುತ್ತದೆ.

ಆಗಸ್ಟ್ ನಲ್ಲಿ ಬ್ಯಾಂಕ್ ಕೆಲಸ ಇದ್ದರೆ ರಜಾ ದಿನದ ಪಟ್ಟಿಯನ್ನು ಒಮ್ಮೆ ಗಮನಿಸಿ. ಯಾವೆಲ್ಲ ದಿನಗಳಲ್ಲಿ ಬ್ಯಾಂಕ್ ಗೆ ರಜಾ ಇರಲಿದೆ ಈ ಕೆಳಗಿದೆ ನೋಡಿ..

ಮೊಹರಂ ಇರುವ ಹಿನ್ನೆಲೆಯಲ್ಲಿ ಆಗಸ್ಟ್ 20 ಶುಕ್ರವಾರ ಸಾರ್ವಜನಿಕ ರಜೆ ಇದೆ. ಆಗಸ್ಟ್‌ನಲ್ಲಿ ಶನಿವಾರ, ಭಾನುವಾರ ಹೊರತುಪಡಿಸಿ ಕೇವಲ ಒಂದು ದಿನ ಮಾತ್ರ ಬ್ಯಾಂಕ್ ಗೆ ರಜೆ ಇರಲಿದೆ.

ಆಗಸ್ಟ್ ನ ಎರಡನೇ ಮತ್ತು ನಾಲ್ಕನೇ ಶನಿವಾರಗಳ ರಜಾ ದಿನಾಂಕಗಳು ಈ ಕೆಳಗಿವೆ.

ಆಗಸ್ಟ್ 1: ಭಾನುವಾರ

ಆಗಸ್ಟ್ 8: ಭಾನುವಾರ

ಆಗಸ್ಟ್ 14: ಎರಡನೇ ಶನಿವಾರ

ಆಗಸ್ಟ್ 15: ಭಾನುವಾರ

ಆಗಸ್ಟ್ 22: ಭಾನುವಾರ

ಆಗಸ್ಟ್ 28: ನಾಲ್ಕನೇ ಶನಿವಾರ

ಆಗಸ್ಟ್ 29: ಭಾನುವಾರ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss