ಈ ಸಾ*ವು ನ್ಯಾಯವೇ? ರಸ್ತೆ ಕಾಮಗಾರಿಗೆ ಅಗೆದ ಹೊಂಡದಲ್ಲಿ ಬಿದ್ದು ಬೈಕ್ ಸವಾರ ದುರ್ಮರಣ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೆಹಲಿಯ ಜನಕಪುರಿ ಪ್ರದೇಶದಲ್ಲಿ ರಸ್ತೆ ಕಾಮಗಾರಿಗಾಗಿ ಅಗೆದಿದ್ದ ಆಳವಾದ ಹೊಂಡಕ್ಕೆ ಬೈಕ್ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಗುರುವಾರ ರಾತ್ರಿ ಕಚೇರಿಯಿಂದ ಮನೆಗೆ ಹೊರಟಿದ್ದ ಕಮಲ್ ಎಂಬ ಯುವಕ ತಡರಾತ್ರಿ ಮನೆ ತಲುಪದೇ ಇದ್ದುದರಿಂದ ಕುಟುಂಬದವರು ಆತಂಕಕ್ಕೊಳಗಾದರು. ರೋಹಿಣಿಯಲ್ಲಿ ಕೆಲಸ ಮಾಡುತ್ತಿದ್ದ ಕಮಲ್ ಕೈಲಾಸಪುರಿಯಲ್ಲಿ ವಾಸವಾಗಿದ್ದು, ರಾತ್ರಿ ಹೊತ್ತಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬದವರು ಹಲವು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಹುಡುಕಾಟ ನಡೆಸಿದರು. ಜನಕಪುರಿ, ಸಾಗರ್‌ಪುರ ಹಾಗೂ ವಿಕಾಸಪುರಿ ಪ್ರದೇಶಗಳಲ್ಲಿ … Continue reading ಈ ಸಾ*ವು ನ್ಯಾಯವೇ? ರಸ್ತೆ ಕಾಮಗಾರಿಗೆ ಅಗೆದ ಹೊಂಡದಲ್ಲಿ ಬಿದ್ದು ಬೈಕ್ ಸವಾರ ದುರ್ಮರಣ!