ಚೀನಾದಲ್ಲಿ ಕೋವಿಡ್‌ ಭಯ ಇನ್ನೂ ಇರೋದಕ್ಕೆ ಇದೇ ಕಾರಣಾನಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಗತ್ತು ಕೋವಿಡ್ ಸಾಂಕ್ರಾಮಿಕದ ಭಯವನ್ನು ಮೀರಿ ಮುನ್ನಡೆಯುತ್ತಿದ್ದರೆ ಅದರ ಜನಕ ಚೀನಾ ಮಾತ್ರ ಇನ್ನೂ ಕೋವಿಡ್ ಭಯದಿಂದ ಹೊರಬಂದಿಲ್ಲ. ಈಗಲೂ ಚೀನಾದಲ್ಲಿ ಸಾಂಕ್ರಾಮಿಕದ ಭೀತಿ ಕಾಡುತ್ತಲೇ ಇದೆ. ಲಾಕ್ ಡೌನ್, ಕ್ವಾರಂಟೈನ್ ಗಳೆನ್ನೆಲ್ಲ ಅಲ್ಲಿನ ಸರ್ಕಾರವೇ ಕಟ್ಟು ನಿಟ್ಟಾಗಿ ಹೇರುತ್ತಿದೆ‌. ಇನ್ನೂ ಕೂಡ ಅಲ್ಲಿನ ಜನರು ಕೋವಿಡ್ ಭೀತಿಯಲ್ಲೇ ಬದುಕುತ್ತಿದ್ದಾರೆ‌.

ಕೋವಿಡ್ ಪ್ರಾರಂಭದಲ್ಲಿ ಪರಿಣಾಮಕಾರಿ ಮಟ್ಟ ಹಾಕಲಾಗಿದೆ ಎಂದು ಜಗತ್ತಿನೆದುರು ಜಂಭ ಕೊಚ್ಚಿಕೊಂಡಿದ್ದ ಚೀನಾ ಈಗ ಕೋವಿಡ್ ಉಲ್ಬಣವನ್ನು ನಿಗ್ರಹಿಸಲಾಗದೇ ಪರದಾಡುತ್ತಿದೆ. ಜಗತ್ತೆಲ್ಲವೂ ಕೋವಿಡ್ ಭೀತಿಯಿಂದ ಹೊರಬಂದು ಪುನಃ ಸಾಮಾನ್ಯ ಬದುಕು‌ ಜೀವಿಸುತ್ತಿದ್ದರೆ ಚೀನಾ ಮಾತ್ರ ಇನ್ನೂ ಕೋವಿಡ್ ಭಯದಲ್ಲೇ ಯಾಕೆ ಜೀವಿಸುತ್ತಿದೆ ಎಂಬುದರ ಕುರಿತು ಅಂತರಾಷ್ಟ್ರೀಯ ಮಾಧ್ಯಮವೊಂದು ವಿಶ್ಲೇಷಣೆ ನೀಡಿದ್ದು ಕೋರೊನಾ ವೈರಸ್ ವಿರುದ್ಧ ಚೀನಾದ ವ್ಯಾಕ್ಸೀನ್ ಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬಂಶವನ್ನು ತೆರೆದಿಟ್ಟಿದೆ.

ಹೌದು ಕೋವಿಡ್ ಪ್ರಾರಂಭದಲ್ಲಿ ಚೀನಾವು ಅಂತರಾಷ್ಟ್ರೀಯ ಲಸಿಕೆಗಳ ಬದಲಾಗಿ ತನ್ನ ದೇಶೀಯ ಲಸಿಕೆ ‘ಸಿನೋವಾಕ್’ ಅನ್ನು ಬಳಸುವಂತೆ ಒತ್ತಾಯಿಸಿತ್ತು. ಅದರ ಈ ನೀತಿಯೇ ಈಗ ಮುಳುವಾಗಿ ಪರಿಣಮಿಸಿದೆ ಎಂದು ವರದಿ ತಿಳಿಸಿದೆ. ಏಕೆಂದರೆ ಉಳಿರ ಅಂತರಾಷ್ಟ್ರೀಯ ಲಸಿಕೆಗಳಿಗೆ ಹೋಲಿಸಿದರೆ ಚೀನಾದ ಲಸಿಕೆಗಳು ಅತ್ಯಂತ ಕಡಿಮೆ ಮಟ್ಟದ ಪರಿಣಾಮಕಾರಿತ್ವ ವನ್ನು ಹೊಂದಿವೆ.

ಇತ್ತೀಚಿನ ಅಧ್ಯಯನಗಳು ಸಿನೊವಾಕ್‌ನಂತಹ ಚೀನೀ ಲಸಿಕೆಗಳು ಸಾವಿನ ವಿರುದ್ಧ 61% ಮತ್ತು ಹಾಸ್ಪಿಟಲೈಸೇಷನ್ ವಿರುದ್ಧ 55% ವರೆಗೆ ಮಾತ್ರ ಪರಿಣಾಮಕಾರಿಯಾಗಿದೆ ಎಂದು ತೋರಿಸುತ್ತವೆ, ಆದರೆ ಇತರ ಅಂತರಾಷ್ಟ್ರೀಯ ಲಸಿಕೆಗಳಾದ ಮಾಡರ್ನಾ ಮತ್ತು ಫೈಜರ್ ಎರಡರಿಂದಲೂ 90% ರಕ್ಷಣೆಯಲ್ಲಿ ಹೆಚ್ಚು ಉತ್ತಮವಾಗಿವೆ.

ಹೀಗಾಗಿ ಇದು ಚೀನಾದ ಜನರಲ್ಲಿ‌ ಅಪನಂಬಿಕೆಗಳನ್ನು ಹುಟ್ಟುಹಾಕಿದೆ ಎನ್ನಲಾಗಿದೆ. ಹಾಗಾಗಿ ಸಾಮೂಹಿಕ ಲಸಿಕಾಕರಣವನ್ನು ಚೀನಾದ ಜನತೆ ತಿರಸ್ಕರಿಸಿದ್ದು ‍ಈನಾ ಶೂನ್ಯ ಕೋವಿಡ್ ನೀತಿಯಂತಹ ಕ್ರಮಗಳ ಮೊರೆ ಹೋಗಬೇಕಾಗದ ಸ್ಥಿತಿ ಉಂಟಾಗಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!