ಇದ್ಯಾವ್‌ ಸೀಮೆ ಫಿಸಿಕಲ್‌ ಎಜುಕೇಷನ್‌? ಮ್ಯಾಚ್‌ನಲ್ಲಿ ಸೋತು ಬಂದ ಮಕ್ಕಳಿಗೆ ಕಾಲಿಂದ ಒದ್ದ ಶಿಕ್ಷಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಟ ಅಂದ್ಮೇಲೆ ಸೋಲು ಗೆಲುವು ಕಾಮನ್‌, ಗೆಲ್ಲೋಕೆ ಟ್ರೈ ಮಾಡ್ಬೇಕು ಆಗಲಿಲ್ಲ ಎಂದರೆ ಸೋಲಿನಿಂದ ಪಾಠ ಕಲಿತು ಮುಂದಕ್ಕೆ ಹೋಗ್ಬೇಕು.. ಇದು ಪಿಟಿ ಟೀಚರ್‌ ಹೇಳಬೇಕಾದ ಮಾತು. ಆದರೆ ಇಲ್ಲೊಬ್ಬ ಟೀಚರ್‌ ಸೋತು ಬಂದ ಮಕ್ಕಳಿಗೆ ಕಾಲಿನಿಂದ ಒದ್ದು, ಕಪಾಳಕ್ಕೆ ಹೊಡೆದು ಸಿಟ್ಟು ತೀರಿಸಿಕೊಂಡಿದ್ದಾನೆ.

ಫುಟ್ಬಾಲ್ ಆಟದಲ್ಲಿ ಕಳಪೆ ಪ್ರದರ್ಶನ ನೀಡಿ ಸೋತಿದ್ದಕ್ಕೆ ದೈಹಿಕ ಶಿಕ್ಷಕರೊಬ್ಬರು ವಿದ್ಯಾರ್ಥಿಗಳನ್ನು ಕಾಲಿನಲ್ಲಿ ಒದ್ದು ಮನಬಂದಂತೆ ಥಳಿಸಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಇಲ್ಲಿನ ಖಾಸಗಿ ಶಾಲೆಯ ದೈಹಿಕ ಶಿಕ್ಷಕ ವಿದ್ಯಾರ್ಥಿಗಳಿಗೆ ಕಪಾಳಮೋಕ್ಷ ಮಾಡುತ್ತಾ ಮನಬಂದಂತೆ ಥಳಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ದೈಹಿಕ ಶಿಕ್ಷಕ ಅಣ್ಣಾಮಲೈ ಎಂದು ಗುರುತಿಸಲಾಗಿದ್ದು, ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ಸಂಗಗಿರಿ ಜಿಲ್ಲಾ ಶಿಕ್ಷಣಾಧಿಕಾರಿ ತನಿಖೆ ಆರಂಭಿಸಿದ್ದು, ಅಣ್ಣಾಮಲೈ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!