Sunday, April 18, 2021

Latest Posts

ನಿಮ್ಮ ಸ್ಮಾರ್ಟ್ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಹಾಗಿದ್ರೆ ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ…

ಎಷ್ಟೇ ಕಾಸ್ಟ್ಲಿ ಸ್ಮಾರ್ಟ್ ಫೋನ್ ತೆಗೆದುಕೊಂಡರೂ ಬ್ಯಾಟರಿ ಬೇಗ ಖಾಲಿಯಾಗುತ್ತೆ ಎನ್ನುವುದು ಎಲ್ಲರ ಸಾಮಾನ್ಯ ಗೋಳು. ದಿನ ಪೂರ್ತಿ HD ವಿಡಿಯೋ ವಿಕ್ಷಣೆ, ಇಂಟರ್ ನೆಟ್ ಆನ್ ಮಾಡಿಯೇ ಇಡುವುದು, ಅಗತ್ಯಕ್ಕಿಂತ ಹೆಚ್ಚು ಮೊಬೈಲ್ ಬಳಸುತ್ತಿದ್ದರೆ ಬ್ಯಾಟರಿ ಖಾಲಿ ಆಗುವುದು ಸಾಮಾನ್ಯವೇ ಅಲ್ವಾ..  ನಿಮ್ಮ ಮೊಬೈಲ್ ಬ್ಯಾಟರಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಇಲ್ಲೊಂದಿಷ್ಟು ಟಿಪ್ಸ್ ಇದೆ ಟ್ರೈ ಮಾಡಿ…

ಮೊಬೈಲ್ ಬಿಸಿ ಆದಾಗ ಬಳಸದಿರಿ:
ಕೆಲವೊಮ್ಮೆಫೋನ್ ಬಳಸುವಾಗ ಬಿಸಿ ಆಗುತ್ತವೆ. ಹೀಗೆ ಅತಿಯಾಗಿ ಬಿಸಿ ಆದಾಗ ಫೋನ್ ಬಳಸವುದು ಬ್ಯಾಟರಿಯ ಬ್ಲಾಸ್ಟ್‌ಗಳಿಗೆ ಕಾರಣವಾಗುತ್ತವೆ.

ಪೋನ್ ಚಾರ್ಜ್ ಪದೇ-ಪದೇ ಮಾಡುವುದು ಬೇಡ:
ದಿನಕ್ಕೆ ಎರಡು ಮೂರು ಬಾರಿ ಫೋನ್ ಚಾರ್ಜ್ ಮಾಡುವುದು ಅಪಾಯಕಾರಿ. ಪೂರ್ತಿಯಾಗಿ ಬ್ಯಾಟರಿ ಖಾಲಿಯಾದಾಗ ಮಾತ್ರ ಚಾರ್ಜ್‌ಗಿಡಿ. ಪದೇ ಪದೇ ಮೊಬೈಲ್ ಚಾರ್ಜ್ ಮಾಡುವಿದರಿಂದ ಬ್ಯಾಟರಿಯ ಸಾಮರ್ಥ್ಯ ಕುಂದುತ್ತದೆ.

ಬ್ಯಾಟರಿ ಸೇವರ್ ಮೋಡ್:
ಕೆಲವೊಂದು ಅಪ್ಲಿಕೇಶನ್‌ಗಳು ನಮ್ಮ ಮೊಬೈಲ್‌ನಲ್ಲಿ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವುದು ಮಾತ್ರವಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಟರಿ ಶಕ್ತಿಯನ್ನು ಹೀರಿಕೊಳ್ಳುತ್ತವೆ. ಬ್ಯಾಟರಿ ಸೇವರ್ ಮೂಡ್ ಆನ್ ಮಾಡಿದಲ್ಲಿ ಬ್ಯಾಟರಿ ‌ಸೇವ್ ಮಾಡಬಹುದು.

ಬ್ಯಾಕ್‌ ಗ್ರೌಂಡ್‌ನ್ನು ಕ್ಲಿಯರ್ ಮಾಡಿ:
ನಾವು ಬಳಸಿದ ಆ್ಯಪ್‌ಗಳು ಬ್ಯಾಕ್‌ಗ್ರೌಂಡ್ ನಲ್ಲಿ ಕಾರ್ಯನಿರ್ವಹಿಸುತ್ತಲೇ ಇರುತ್ತವೆ. ವಿನಾಕಾರಣ ಬ್ಯಾಟರಿಯನ್ನು ಬಳಸುತ್ತವೆ. ಅದಕ್ಕಾಗಿ ಆಗಾಗ ಬ್ಯಾಕ್‌ ಗ್ರೌಂಡ್‌ ಆ್ಯಪ್ಸ್‌ ಕ್ಲಿಯರ್‌ ಮಾಡುತ್ತಿರಬೇಕು.

ಬ್ರೈಟ್ನೆಸ್‌ ಬೇಡ:
ಬ್ರೈಟ್ನೆಸ್ ಹೆಚ್ಚಿಸಿದಷ್ಟು ಸ್ಮಾರ್ಟ್ ಫೋನ್‌ಗಳು ಬ್ಯಾಟರಿ ಸಾಮರ್ಥ್ಯವನ್ನು ಕಡಿತಗೊಳಿಸುತ್ತದೆ. ಸ್ಕ್ರೀನ್‌ ಬ್ರೈಟ್ನೆಸ್‌ ಲೆವಲ್‌ ಅನ್ನು ಆಟೋಮ್ಯಾಟಿಕ್ ಮೋಡ್‌ನಲ್ಲಿ ಇರಿಸಿ. ಇದರಿಂದ ಬ್ಯಾಟರಿ ಉಳಿಕೆ ಆಗುತ್ತದೆ.

ಸ್ಲೀಪ್ ಮೋಡ್:
ಸ್ಮಾರ್ಟ್ ಫೋನ್ ನಲ್ಲಿ ಸ್ಲೀಪ್ ಮೋಡ್ ಆಯ್ಕೆಗಳು ಸಿಗುತ್ತವೆ. ಸ್ಲೀಪ್‌ ಟೈಮ್‌ ಅನ್ನು ಬಳಸುವುದರಿಂದ ಫೋನ್‌ ಬ್ಯಾಟರಿ ಉಳಿಸಲು ಸಹಾಯವಾಗುತ್ತದೆ.

ವೈಬ್ರೈಟ್ ಮೂಡ್:
ಫೋನ್ ವೈಬ್ರೈಟ್‌ ಮೋಡ್ ನಲ್ಲಿಟ್ಟರೆ‌ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆ. ಆದಷ್ಟು ವೈಬ್ರೈಟ್‌ ಮೋಡ್‌ ಆಯ್ಕೆ ಬಳಸುವುದನ್ನು ನಿಲ್ಲಿಸಿ.

ಜಿಪಿಎಸ್, ಬ್ಲೂಟೂತ್, ವೈಫೈ:
ಅಗತ್ಯವಿಲ್ಲದಿದ್ದಾಗ ಜಿಪಿಎಸ್, ಬ್ಲೂಟೂತ್, ವೈಫೈ ಆಫ್ ಮಾಡಿಬಿಡಿ. ಏಕೆಂದರೆ ಜಿಪಿಎಸ್ ಹೆಚ್ಚು ಬ್ಯಾಟರಿ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss