Sunday, April 11, 2021

Latest Posts

ಎಡಪಂಥೀಯ ಭಯೋತ್ಪಾದನೆ ಪರವಾಗಿ ನಿಮ್ಮ ನಿಲುವಾ? ಯಾಕೆ ನೀವು ಮೌನ ವಹಿಸಿದ್ದೀರಿ: ಸಿ.ಟಿ.ರವಿ ಪ್ರಶ್ನೆ

ಹೊಸ ದಿಗಂತ ವರದಿ , ಚಿಕ್ಕಮಗಳೂರು:

ನಾನು ಗೌರಿ ಎಂದು ಮೋಂಬತ್ತಿ ಹಿಡಿದ ಆಶಾಢಭೂತಿತನದವರು ಛತ್ತೀಸ್‍ಗಡಲ್ಲಿ 27 ಜನ ಸೈನಿಕರನ್ನು ನಕ್ಸಲರು ಹತ್ಯೆ
ಮಾಡಿದಾಗ ಮೋಂಬತ್ತಿ ಯಾಕೆ ಹಿಡಿಯಲಿಲ್ಲ. ನಿಮ್ಮ ಕಣ್ಣಲ್ಲಿ ಯಾಕೆ ನೀರು ಬರಲಿಲ್ಲ ಎಂದು ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.
ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಡಪಂಥೀಯ ಭಯೋತ್ಪಾದನೆ ಪರವಾಗಿ ನಿಮ್ಮ ನಿಲುವಾ? ಯಾಕೆ ನೀವು ಮೌನ ವಹಿಸಿದ್ದೀರಿ? ಈ ಬಗ್ಗೆ ಗಂಭೀರ ಆಲೋಚನೆ ಮಾಡಬೇಕಾಗುತ್ತದೆ ಎಂದರು.
ದೇಶವಿರೋಧಿ ಸಂಘಟನೆಗಳು ಆರಾಜಕತೆ ಹುಟ್ಟು ಹಾಕಲು ಎಲ್ಲಾ ವಿಷಯಗಳನ್ನೂ ವೈಭವೀಕರಿಸಿ, ದೇಶ ಒಡೆಯುವ ಸಂಚು ರೂಪಿಸುತ್ತಿರುವುದು ವ್ಯಕ್ತವಾಗುತ್ತಿದೆ. ಸಣ್ಣ ಸಣ್ಣ ಸಂಗತಿಗಳನ್ನೂ ಇದಕ್ಕೆ ಬಳಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ನಿರಂತರ ಜಾಗೃತಿ ಮಾಡಬೇಕು ಅದನ್ನು ನಾವು ಮಾಡುತ್ತೇವೆ ಎಂದರು.
ಕಾನೂನು ಸುವ್ಯವಸ್ಥೆಗೆ ಅಡ್ಡಿ ಪಡಿಸುವವರನ್ನು ಕಾನೂನಿಗೆ ಧಕ್ಕೆ ತರುವವರೆಂದೇ ಪರಿಗಣಿಸಬೇಕು. ಪೊಲೀಸ್, ಸೈನ್ಯದ ಮೇಲೆ ಬಂದೂಕು ಎತ್ತುವವರ ಬಗ್ಗೆ ಕನಿಕರ ಇರಬಾರದು. ಅವರಿಗೆ ಅಮುರಾಬಿ ಸಿದ್ಧಾಂತ ಮಾತ್ರ ಅರ್ಥವಾಗುತ್ತೆ. ಅದೇ ಸಿದ್ಧಾಂತದ ಮೂಲಕ ಉತ್ತರ ಕೊಡಬೇಕು ಎಂದರು.
ಎಡಪಂಥೀಯ ಸಿದ್ಧಾಂತ ಮತ್ತು ಅದರಿಂದ ದುಷ್ಪ್ರೇರಣೆ ಪಡೆದ ಜನ 27 ಸೈನಿಕರನ್ನು ಹತ್ಯೆ ಮಾಡಿದರು. ಸೈನಿಕರಿಗೆ ಶತೃ ಆದವರು ದೇಶಕ್ಕೂ ಶತೃವೇ, ಯಾರು ಸಂವಿಧಾನ ಒಪ್ಪಲ್ಲವೋ ಅವರಿಗೆ ಬ್ಯಾಲೆಟ್ ಮೇಲೆ ನಂಬಿಕೆ ಇರುವುದಿಲ್ಲ. ಸೈನಿಕರನ್ನು ಶತೃಎಂದು ಪರಿಗಣಿಸುವವರು ದೇಶದಲ್ಲಿರುವುದಕ್ಕೆ ಅರ್ಹತೆ ಇರುವುದಿಲ್ಲ. ಅವರು ನಾಲಾಯಕ್‍ಗಳು ಎಂದರು.
ಕಾಂಗ್ರೆಸ್ ಆಧೋಗತಿಗೆ ವೈಯಕ್ತಿಕ ದೌರ್ಬಲ್ಯಗಳನ್ನು ಮೀರಿ ಸಾರ್ವಜನಿಕ ಕ್ಷೇತ್ರದಲ್ಲಿ ನಿಂತುಕೊಳ್ಳಬೇಕು ಎಂದು ಸಿಡಿ ಪ್ರಕರಣ ಕುರಿತು ಉತ್ತರಿಸಿದ ರವಿ, ದೌರ್ಬಲ್ಯಗಳನ್ನ ದುರುಪಯೋಗ ಪಡಿಸಿಕೊಂಡು ರಾಜಕಾರಣ ಮಾಡುವಂತ ಕೆಲಸವನ್ನ ಕಾಂಗ್ರೆಸ್ ಮಾಡುತ್ತಿದೆ. ಆ ಪಕ್ಷ ಯಾವ ಅಧೋಗತಿಗೆ ಇಳಿದಿದೆ ಎನ್ನುವುದಕ್ಕೆ ನಿದರ್ಶನ ಎಂದರು.
ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯ ಮೂರು ಕ್ಷೇತ್ರದಲ್ಲಿ ಬಜೆಪಿ ಗೆಲುವು ಸಾಧಿಸುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss