Thursday, September 29, 2022

Latest Posts

ಸಾಹಸ ಸಿಂಹನ ಫ್ಯಾನ್ಸ್‌ ಕ್ರೇಜ್‌: ಅಭಿಮಾನ್‌ ಸ್ಟುಡಿಯೋದಲ್ಲಿ ಹೇಗಿದೆ ಗೊತ್ತಾ ದಾದಾ ಹುಟ್ಟುಹಬ್ಬದ ಸೆಲಬ್ರೇಷನ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದು ಕರುನಾಡಿನ ಸಾಹಸ ಸಿಂಹ ದಿವಂಗತ ಡಾ.ವಿಷ್ಣುವರ್ಧನ್ ಅವರ 72ನೇ ಜನ್ಮದಿನ. ಇಂದು ಅವರು ನಮ್ಮೊಂದಿಗಿಲ್ಲ ಎಂಬ ನೋವು ಸದಾ  ಮಾಸುವಂತಹದ್ದಲ್ಲ. ಅಭಿಮಾನಿಗಳ ಪಾಲಿನ ದೇವರು, ಕೋಟ್ಯಾಂತರ ಜನರ ಹೃದಯದಲ್ಲಿ ಯಜಮಾನನಾಗಿ ನೆಲೆಸಿದ್ದಾರೆ. ಹಾಗಾಗಿ ವಿಷ್ಣುವರ್ಧನ್‌ ಅಂತ್ಯಕ್ರಿಯೆಯಾದ ಅಭಿಮಾನ್​ ಸ್ಟುಡಿಯೋದಲ್ಲಿ ಅಭಿಮಾನಿಗಳೇ ದಂಡೇ ಇದೆ. ಸ್ಟುಡಿಯೋದ ಹೊರಭಾಗದಲ್ಲಿ ದಾದಾ ಅವರ ಕಟೌಟ್​ಗಳನ್ನು ಹಾಕಲಾಗಿದೆ.

Thumbnail image

ವಿಷ್ಣುವರ್ಧನ್‌ ಅಭಿನಯಿಸಿರುವ ಎಲ್ಲಾ ಸಿನಿಮಾಗಳ ಕಟೌಟ್‌ಗಳನ್ನು ಇರಿಸಲಾಗಿದೆ.  50 ಚಿತ್ರಗಳ 50ಅಡಿ ಕಟೌಟ್‌ಗಳು ಅಭಿಮಾನ್‌ ಸ್ಟುಡಿಯೋದಲ್ಲಿ ರಾರಾಜಿಸುತ್ತಿವೆ. ಇಡೀ ಭಾರತದ ಸಿನಿ ರಂಗದಲ್ಲಿ 50 ಕಟೌಟ್​ಗಳನ್ನ ಹಾಕಿಸಿಕೊಂಡ ಮೊದಲ ನಟ ಕೂಡ ಇವರೇ!. ವಿಷ್ಣುದಾದಾ ಅಭಿಮಾನಿಗಳು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಂಡಿದ್ದಾರೆ. ವಿಷ್ಣುವರ್ಧನ್‌ ಅವರ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿ ಅನ್ನದಾನ, ರಕ್ತದಾನದಂತಹ ಕಾರ್ಯಕ್ರಮಗಳನ್ನು ಸಹ ಮಾಡುತ್ತಿದ್ದಾರೆ.

Vishnuvardhan Cutout

ಬೆಳಗ್ಗೆಯಿಂದ ಅಭಿಮಾನ್‌ ಸ್ಟುಡಿಯೋ ಬಳಿ ಜನಜಾತ್ರೆಯೇ ನೆರೆದಿದೆ. ನೆಚ್ಚಿಉನ ನಟನ ಸಮಾಧಿ ದರ್ಶನ ಪಡೆದು ಹುಟ್ಟುಹಬ್ಬದ ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ. ಹಾಗಾಯೇ ಇಂದು ರಿಯಲ್‌ ಸ್ಟಾರ್‌ ಉಪೇಂದ್ರ ಹಾಗೂ ನಟಿ ಶೃತಿ ಅವರ ಜನ್ಮದಿನ ಕೂಡ ಹೌದು ಈ ಇಬ್ಬರು ತಾರೆಯರಿಗೂ ಕೂಡ ಅಭಿಮಾನಿಗಳು ಹೃದಯಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!