ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ಕಾನ್ ಭಾರತದಲ್ಲಿ ಅತೀ ದೊಡ್ಡ ವಂಚಕ ಸಂಸ್ಥೆ, ಹರೇ ರಾಮ್ ಹರೇ ಕೃಷ್ಣ ಅಂತ ಹೇಳ್ಕೊಂಡು ಕಟುಕರಿಗೆ ಗೋವುಗಳನ್ನು ಮಾರಾಟ ಮಾಡ್ತಾರೆ ಎಂದು ಮಾಜಿ ಕೇಂದ್ರ ಸಚಿವೆ ಬಿಜೆಪಿ ಸಂಸದೆ ಮನೇಕಾ ಗಾಂಧಿ ಆರೋಪಿಸಿದ್ದಾರೆ.
ಈ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದ್ದು, ರಾಷ್ಟ್ರೀಯ ಲೋಕ ದಳ ರಾಷ್ಟ್ರೀಯ ಪ್ರಚಾರ ಉಸ್ತುವಾರಿ ಪ್ರಶಾಂತ್ ಕನೋಜಿಯಾ ಅವರು ಟ್ವಿಟರ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.
ಈ ಹೇಳಿಕೆ ಇರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ನಾನು ಹೇಳ್ತೀನಿ ಕೇಳಿ, ದೇಶದಲ್ಲಿ ಅತಿ ದೊಡ್ಡ ಮೋಸಗಾರರು ಯಾರು ಗೊತ್ತಾ? ಅದು ಇಸ್ಕಾನ್, ಗೋಶಾಲೆ ನಡೆಸಲು ಸರ್ಕಾರದಿಂದ ಬೇಕಾದ ಎಲ್ಲ ಸೌಲಭ್ಯ ಪಡೆದಿದ್ದಾರೆ. ದೊಡ್ಡ ಜಮೀನು, ಗೋಮಾಳ ಎಲ್ಲ ವ್ಯವಸ್ಥೆ ಪಡೆದಿದ್ದಾರೆ. ಆದರೆ ಆ ಜಾಗಕ್ಕೆ ಹೋಗಿ ನೋಡಿದಾಗ ರಿಯಾಲಿಟಿ ಗೊತ್ತಾಗುತ್ತದೆ.
ಇಸ್ಕಾನ್‌ನ ಅನಂತಪುರದ ಗೋ ಶಾಲೆಗೆ ನಾನೇ ಹೋಗಿದ್ದೆ, ಒಂದು ಹಸುವೂ ಇಲ್ಲ. ಕರುಗಳೆಲ್ಲ ಮಾರಾಟ ಮಾಡಿದ್ದಾರೆ ಅನ್ನೋದೆ ಇದರ ಸಾರಾಂಶ ಅಲ್ವಾ? ಹರೇ ರಾಮ್ ಹರೇ ಕೃಷ್ಣ ಎಂದು ಹೇಳಿಕೊಂಡು ಓಡಾಡೋ ಇವರು ಹಾಲಿನಲ್ಲೇ ನಮ್ಮ ಜೀವನ ಎನ್ನೋದಕ್ಕೆ ಅರ್ಥ ಸಿಕ್ಕಿದೆ. ಇಸ್ಕಾನ್‌ನಲ್ಲೇ ಇಷ್ಟೊಂದು ಹಸುಗಳು ಮಾರಾಟ ಆದ್ರೆ ಬೇರೆಡೆ ಇನ್ನೆಷ್ಟು ಆಗುತ್ತಿರಬೇಡ ಎಂದಿದ್ದಾರೆ.