Sunday, August 14, 2022

Latest Posts

“ಇಸ್ಲಾಮಿಸಂ ಜಾಗತಿಕ ಭದ್ರತೆಗೆ ದೊಡ್ಡ ಸವಾಲು”

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇಸ್ಲಾಮ್ ಸಿದ್ದಾಂತ ಹಾಗೂ ಹಿಂಸಾಚಾರ ಜಗತ್ತಿಗೆ ಭದ್ರತಾ ಆತಂಕ ಉಂಟು ಮಾಡಲಿದೆ ಎಂದು ಬ್ರಿಟನ್ ನ ಮಾಜಿ ಪ್ರಧಾನಿ ಟೋನಿ ಬ್ಲೇರ್ ತಿಳಿಸಿದ್ದಾರೆ.
ಅಮೆರಿಕದ ಅವಳಿ ಕಟ್ಟಡಗಳ ಮೇಲೆ ನಡೆದ ದಾಳಿಯ ಬಗ್ಗೆ ಮಾತನಾಡುತ್ತಿದ್ದ ಅವರು, ಕಟ್ಟರ್ ಇಸ್ಲಾಂ ಕೇವಲ ಜಾತಿ ಬೆಳವಣಿಗೆ ಮಾತ್ರವಲ್ಲದೆ ರಾಜಕೀಯದಲ್ಲೂ ಹೆಚ್ಚು ಪರಿಣಾಮ ಬೀರುತ್ತಿದೆ.
ಟೋನಿ ಬ್ಲೇರ್ ಅವರ ಪ್ರಕಾರ ಇಸ್ಲಾಂ ಸಿದ್ಧಾಂತವಾದ ಎಂಬುದೇ ಜಾಗತಿಕ ಭದ್ರತೆಗೆ ಸವಾಲು. ಈ ಇಸ್ಲಾಂವಾದ ಅನುಕರಿಸುವವರಲ್ಲಿ ಕೆಲವರು ಹಿಂಸಾಮಾರ್ಗ ತುಳಿದಿಲ್ಲ. ಆದರೆ ಅಂಥವರ ಗುರಿಯೂ ಹಿಂಸೆಯನ್ನು ಆಚರಿಸುತ್ತಿರುವವರು ಹೊಂದಿರುವಂಥದ್ದೇ ಆಗಿದೆ. ಅಫಘಾನಿಸ್ತಾನದಲ್ಲಿ ಕಾಣುತ್ತಿರುವುದು ಇಸ್ಲಾಂ ತೀವ್ರವಾದಿಗಳ ಜಾಗತಿಕ ಕಾರ್ಯಸೂಚಿಯ ಒಂದು ಭಾಗ ಮಾತ್ರ ಎಂದು ಬ್ಲೇರ್ ಎಚ್ಚರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss