ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಜಾದಲ್ಲಿರುವ ಹಮಾಸ್ ಉಗ್ರರನ್ನು ಸದೆಬಡೆಯಲು ಇಸ್ರೇಲ್ ಸೇನೆ ಪಣತೊಟ್ಟಿದ್ದು, ಗಾಜಾ ಪ್ರವೇಶಿಸಿ ಮೂವರು ಉಗ್ರರನ್ನು ಸದೆಬಡೆದಿದೆ.
ಈಗಾಗಲೇ ಯುದ್ಧ ಆರಂಭವಾಗಿ 21 ನೇ ದಿನ ಕಳೆದಿದ್ದು, ವೈಮಾನಿಕ ದಾಳಿಯಲ್ಲಿ ಮೂವರು ಪ್ರಮುಖ ಭಯೋತ್ಪಾಕರನ್ನು ಹತ್ಯೆ ಮಾಡಲಾಗಿದೆ.
ದರಾಜ್ ಟುಫಾ ಬೆಟಾಲಿಯನ್‌ನಲ್ಲಿದ್ದ ಮೂವರು ಪ್ರಮುಖ ಉಗ್ರರಾದ ಇಬ್ರಾಹಿಮ್ ಜಬ್ಡಾ, ರಿಫಾತ್ ಅಬ್ಬಾಸ್ ಹಾಗೂ ತಾರೆಕ್ ಮಾರೂಫ್ ಮೃತರು. ಈ ಬಗ್ಗೆ ಇಸ್ರೇಲ್ ರಕ್ಷಣಾ ಪಡೆ ಟ್ವೀಟ್ ಮಾಡಿದ್ದು, ವೈಮಾನಿಕ ದಾಳಿಯಲ್ಲಿ ಹಮಾಸ್ ಭಯೋತ್ಪಾದಕರ ಸಂಘಟನೆಯ ಪ್ರಮುಖರ ಹತರಾಗಿದ್ದಾರೆ. ಅಕ್ಟೋಬರ್ ಏಳರಂದು ಇಸ್ರೇಲ್ ಮೇಲೆ ನಡೆದ ದಾಳಿಯಲ್ಲಿ ಈ ಮೂವರು ಮಹತ್ವದ ಪಾತ್ರ ವಹಿಸಿದ್ದರು ಎಂದು ಹೇಳಲಾಗಿದೆ.