ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ನಡೆಸುತ್ತಿರುವ ವಾಯುದಾಳಿಯು ಗಾಜಾ ಛಿದ್ರವಾಗುತ್ತಿದ್ದು, 24 ಗಂಟೆಯಲ್ಲಿ 400 ಉಗ್ರ ನೆಲೆಗಳನ್ನು ನಾಶ ಮಾಡಿದ್ದಾಗಿ ಇಸ್ರೇಲ್ ಹೇಳಿದೆ. ಇದರಲ್ಲಿ 141 ಪ್ಯಾಲೆಸ್ಟೈನಿಯನ್ನರು ಸಾವಿಗೀಡಾಗಿದ್ದಾರೆ.
ಮುಗ್ಧ ನಾಗರಿಕರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವುದಕ್ಕಾಗಿ ಕಾರ್ಯಾಚರಣೆಯನ್ನು ಮುಂದುವರೆಸುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ.
ಈ ಬಗ್ಗೆ ಇಸ್ರೇಲ್ ಸೇನೆ ಟ್ವೀಟ್ ಮಾಡಿದ್ದು, ಹಮಾಸ್ ಭಯೋತ್ಪಾದಕರ ಸಾಮರ್ಥ್ಯ ಕುಗ್ಗಿಸುವ ನಿಟ್ಟಿನಲ್ಲಿ, 400 ಕ್ಕೂ ಹೆಚ್ಚಿನ ಭಯೋತ್ಪಾದಕ ತಾಣಗಳ ಮೇಲೆ 24 ಗಂಟೆಗಳಲ್ಲಿ ದಾಳಿ ನಡೆಸಲಾಗಿದೆ. ಹಮಾಸ್ ನ ಗನ್ ಮ್ಯಾನ್ ಗಳು ಇಸ್ರೇಲ್ ಕಡೆಗೆ ರಾಕೆಟ್ ಗಳನ್ನು ತಿರುಗಿಸಿದ್ದಾರೆ. ಸಮುದ್ರದ ಮೂಲಕ ಇಸ್ರೇಲ್ ಒಳಗೆ ನುಗ್ಗಲು ಹಮಾಸ್ ನ ಕಾರ್ಯನಿರ್ವಹಣೆಯಲ್ಲಿರುವ ಟನಲ್ ಶಾಫ್ಟ್ ಗಳು ಭಯೋತ್ಪಾದಕರಿಗೆ ಅವಕಾಶ ನೀಡುತ್ತಿದೆ.
ಹಮಾಸ್ ಕಮಾಂಡ್ ಸೆಂಟರ್ಗಳನ್ನು ಕಾರ್ಯಕರ್ತರು ಬಳಸುತ್ತಾರೆ ಮತ್ತು ಮಸೀದಿಗಳಲ್ಲಿ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುತ್ತಾರೆ. ಅಮಾಯಕ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಐಡಿಎಫ್ ಕಾರ್ಯಾಚರಣೆಯನ್ನು ಮುಂದುವರಿಸುತ್ತದೆ ಎಂದು ಇಸ್ರೇಲ್ ಹೇಳಿದೆ.ಐಡಿಎಫ್ ಚೀಫ್ ಆಫ್ ಸ್ಟಾಫ್, ಲೆಫ್ಟಿನೆಂಟ್ ಜನರಲ್ ಹರ್ಜಿ ಹಲೇವಿ ಮಾತನಾಡಿ, ಇಸ್ರೇಲ್, ಹಮಾಸ್ ನ್ನು ಸಂಪೂರ್ಣ ನಾಶವಾಗುವ ಸ್ಥಿತಿಗೆ ತರಲು ಬಯಸುತ್ತದೆ ಎಂದು ಹೇಳಿದರು.
ಇಸ್ರೇಲ್ಗೆ ಫ್ರಾನ್ಸ್ ಅಧ್ಯಕ್ಷರ ಭೇಟಿ:
ಈ ಎಲ್ಲ ವಿದ್ಯಮಾನಗಳ ಮಧ್ಯೆ ಅಮೆರಿಕ ತನ್ನ ರಕ್ಷಣಾ ಸಲಹೆಗಾರರನ್ನು ಇಸ್ರೇಲ್ಗೆ ಕಳುಹಿಸಿದ್ದರೆ, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಟೆಲ್ ಅವಿವ್ಗೆ ಭೇಟಿ ನೀಡಿದ್ದಾರೆ.
ಯುದ್ಧದ ನಡುವೆ ಈಚೆಗಷ್ಟೇ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಇಸ್ರೇಲ್ಗೆ ಭೇಟಿ ನೀಡಿ ಬೆಂಬಲ ನೀಡಿದ್ದರು. ಇಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಟೆಲ್ ಅವೀವ್‌ಗೆ ಭೇಟಿ ನೀಡಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಜೊತೆಗೆ ಮಾತುಕತೆ ನಡೆಸಿದ್ದಾರೆ.