ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ತೀವ್ರತೆ ಹೆಚ್ಚಾಗಿದ್ದು, ಒಟ್ಟಾರೆ ಈ ಯುದ್ಧದಿಂದಾಗಿ ಎಂಟು ಸಾವಿರ ಮಂದಿ ಜೀವ ಕಳೆದುಕೊಂಡಿದ್ದಾರೆ.
ಪ್ಯಾಲೆಸ್ಟೈನ್‌ನಲ್ಲಿ ಲಕ್ಷಾಂತರ ಮಂದಿ ನೆಲೆ ಕಳೆದುಕೊಂಡಿದ್ದು, ಅನ್ನ ನೀರು ಇಲ್ಲದೆ ಒದ್ದಾಡುತ್ತಿದ್ದಾರೆ. ಮನೆ ಕಳೆದುಕೊಂಡು ಸಂಕಷ್ಟದಲ್ಲಿರುವ ಜನತೆಯ ನೆರವಿದೆ ಅಂತಾರಾಷ್ಟ್ರೀಯ ಸಮುದಾಯಗಳು ಧಾವಿಸಿದ್ದು, ಮೂರು ಡಜನ್ ಟ್ರಕ್‌ಗಳು ಗಾಜಾ ಪ್ರವೇಶಿಸಿವೆ.
ಗಾಜಾಪಟ್ಟಿ ಮೇಲೆ ಇಸ್ರೇಲ್ ಬಾಂಬ್ ದಾಳಿ ಮುಂದುವರಿಸಿದ್ದು, ಸದ್ಯ ಮೆಟ್ರೋ ಸುರಂಗಗಳನ್ನು ಇಸ್ರೇಲ್ ಪಡೆ ಟಾರ್ಗೆಟ್ ಮಾಡಿದೆ. ವಾಯು ದಾಳಿಯ ಜೊತೆಗೆ ಭೂ ದಾಳಿಯನ್ನೂ ಇಸ್ರೇಲ್ ನಡೆಸುತ್ತಿದ್ದು, ಪ್ಯಾಲೆಸ್ಟೈನ್‌ನ ಎಂಟು ಸಾವಿರ ಮಂದಿ ಮೃತಪಟ್ಟಿದ್ದಾರೆ.
ತುರ್ತು ಕದನ ವಿರಾಮ ಘೋಷಣೆ ಮಾಡುವಂತೆ ವಿಶ್ವಸಂಸ್ಥೆ ನಿರ್ಣಯ ಅಂಗೀಕಾರ ಮಾಡಿದ್ದರೂ ಇಸ್ರೇಲ್ ಹಮಾಸ್ ಯುದ್ಧ ಮುಂದುವರಿದಿದೆ. ಈಜಿಪ್ಟ್‌ನಿಂದ ಸಹಾಯಧನ ಟ್ರಕ್‌ಗಳು ಗಾಜಾಪಟ್ಟಿ ಪ್ರವೇಶಿಸಿದ್ದು, ಒಟ್ಟಾರೆ 33 ಟ್ರಕ್‌ಗಳಲ್ಲಿ ಆಹಾರ, ನೀರು ಹಾಗೂ ಔಷಧ ಸರಬರಾಜು ಮಾಡಲಾಗಿದೆ. ಗಾಜಾದ ದಕ್ಷಿಣ ಭಾಗಕ್ಕೆ ಜನರು ಪಲಾಯನ ಮಾಡಿದ್ದಾರೆ, ಇನ್ನೂ ಆರು ಸಾವಿರ ಮಂದಿ ಉತ್ತರ ಗಾಜಾದಲ್ಲಿಯೇ ಇದ್ದಾರೆ, ಒಟ್ಟಾರೆ 14 ಲಕ್ಷಕ್ಕೂ ಹೆಚ್ಚಿನ ಜನರು ತಮ್ಮ ಮನೆಗಳನ್ನು ಬಿಟ್ಟು ಬೇರೆ ಸ್ಥಳಗಳಿಗೆ ತೆರಳಿದ್ದಾರೆ,