Wednesday, August 17, 2022

Latest Posts

ಇಸ್ರೇಲ್-ಪ್ಯಾಲೆಸ್ತೀನ್ ನಡುವೆ ರಾಕೆಟ್ ದಾಳಿ: 32 ಮಂದಿ ಸಾವು, 220 ಮಂದಿಗೆ ಗಾಯ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ವೇಳೆ ಇಸ್ರೇಲ್ ಗಾಜಾ ಸಿಟಿ ಮೇಲೆ ರಾಕೆಟ್ ದಾಳಿ ನಡೆಸಿದ್ದು, ದಾಳಿಯಲ್ಲಿ 32 ಮಂದಿ ಮೃತಪಟ್ಟಿದ್ದಾರೆ.
ಮಂಗಳವಾರ ಪ್ಯಾಲೆಸ್ತೀನ್ ನ ಹಮಾಸ್ ಬಂಡುಕೋರರು ಹಾಗೂ ಇಸ್ರೇಲ್ ಸೇನಾಪಡೆ ನಡುವಿನ ಸರಣಿ ರಾಕೆಟ್ ದಾಳಿಯಲ್ಲಿ ಹಮಾಸ್ ಉಗ್ರ ಸಂಘಟನೆಗೆ ಸೇರಿದ ಬರೊಬ್ಬರಿ 130 ಉಗ್ರ ಶಿಬಿರಗಳ ಮೇಲೆ ಇಸ್ರೇಲ್ ದಾಳಿ ನಡೆಸಿದೆ.
ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಇಸ್ರೇಲ್ ಸುಮಾರು 5 ಸಾವಿರ ಯೋಧರನ್ನು ನಿಯೋಜಿಸಿದೆ. ಇಸ್ರೇಲ್ ನ ಈ ದಾಳಿಯಲ್ಲಿ ಹಮಾಸ್ ಬಂಡುಕೋರರ ಫೀಲ್ಡ್ ಕಮಾಂಡರ್ ಮನೆ ಹಾಗೂ ಎರಡು ಗಡಿ ಸುರಂಗಗಳನ್ನು ಗುರಿಯಾಗಿಸಿದೆ.
ಕಳೆದ ಒಂದು ವಾರದಿಂದ ಜೆರೋಸೆಲೆಂನ ಅಲ್-ಅಕ್ಸಾ ಮಸೀದಿ ಬಳಿ ಪ್ರಾರಂಭವಾದ ಸಂಘರ್ಷ ಇದೀಗ ತೀವ್ರ ಸ್ವರೂಪ ಪಡೆದಿದೆ. ಗಾಜಾ ಪ್ರದೇಶದ 9 ಮಕ್ಕಳು ಸೇರಿದಂತೆ 24 ಪ್ಯಾಲೆಸ್ತೇನಿಗಳು ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!