ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಕಳೆದ ರಾತ್ರಿ ಇಸ್ರೇಲ್ ಫೈಟರ್ ವಿಮಾನಗಳು ಗಾಜಾ ಮೇಲೆ ದಾಳಿ ನಡೆಸಿದೆ.
ಉಭಯ ಪ್ರದೇಶಗಳ ಘರ್ಷಣೆ ಅಂತ್ಯಗೊಳಿಸಲು ಅನೇಕ ರಾಜತಾಂತ್ರಿಕ ಪ್ರಯತ್ನಗಳು ನಡೆದರೂ, ತಡ ರಾತ್ರಿ ಇಸ್ರೇಲ್ ಪ್ಯಾಲೆಸ್ತೀನ್ ಮೇಲೆ ದಾಳಿ ನಡೆಸಿದೆ. ಇಸ್ರೇಲ್ ನಡೆಸಿದ ದಾಳಿಗೆ ಪ್ಯಾಲೆಸ್ತೀನ್ ತತ್ತರಿಸಿ ಹೋಗಿದ್ದು, ಗಾಜಾದ 126 ಮಂದಿ ಮೃತಪಟ್ಟಿದ್ದು, 950 ಮಂದಿ ಗಾಯಗೊಂಡಿದ್ದಾರೆ.
ಸೋಮವಾರದಿಂದ ಹಮಾಸ್ ಹಾಗೂ ಇಸ್ರೇಲ್ ಸಶಸ್ತ್ರ ಪಡೆಗಳ ನಡುವೆ ನಡೆದ ರಾಕೆಟ್ ಗುಂಡಿನ ದಾಳಿ ನಡೆಯುತ್ತಿದೆ.