Wednesday, August 17, 2022

Latest Posts

ಇಸ್ರೇಲ್ ದಾಳಿಗೆ ಪ್ಯಾಲೆಸ್ತೀನ್ ತತ್ತರ: ಗಾಜಾದಲ್ಲಿ 65 ಮಂದಿ ಸಾವು, 365 ಜನರಿಗೆ ಗಾಯ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕಳೆದ 3 ದಿನಗಳಿಂದ ತೀವ್ರಗೊಂಡಿರುವ ಇಸ್ರೇಲ್- ಪ್ಯಾಲೆಸ್ತಾನಿ ನಡುವಿನ ಸಂಘರ್ಷ ತೀವ್ರ ರೂಪಕ್ಕೆ ತಿರುಗಿದ್ದು, ಇಸ್ರೇಲ್ ರಾಕೆಟ್ ದಾಳಿಗೆ ಗಾಜಾದ 65 ಮಂದಿ ಮೃತಪಟ್ಟಿದ್ದಾರೆ.
ಇಸ್ರೇಲ್ ದಾಳಿಗೆ ಹಮಾಸ್ ಗಾಜಾ ನಗರದ ಕಮಾಂಡರ್ ಬಾಸ್ಸೆಮ್ ಇಸಾ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ 16 ಮಕ್ಕಳು, 5 ಮಹಿಳೆಯರು ಸೇರಿ 65 ಮಂದಿ ಬಲಿಯಾಗಿದ್ದು, ಕನಿಷ್ಠ 365 ಮಂದಿ ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ತಾನಿ ಆರೋಗ್ಯ ಸಚಿವಾಲಯ ತಿಳಿಸಿದೆ.
ಪ್ಯಾಲಿಸ್ತಾನ್ ದಾಳಿಗೆ ಇಸ್ರೇಲ್ ನಲ್ಲಿ 5 ವರ್ಷದ ಮಗು ಸೇರಿದಂತೆ 20 ಮಂದಿ ಗಾಯಗೊಂಡಿದ್ದು, 7 ಮಂದಿ ಮೃತಪಟ್ಟಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!