Tuesday, June 28, 2022

Latest Posts

ಪ್ಯಾಲೆಸ್ತೀನಿನ ಅಗ್ನಿ ಬಲೂನ್ ದಾಳಿಗೆ ಇಸ್ರೇಲ್ ವೈಮಾನಿಕ ಪ್ರತಿ ದಾಳಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇಸ್ರೇಲ್-ಗಾಜಾದಲ್ಲಿ ಇದೀಗ ಮತ್ತೆ ಯುದ್ದ ವಿಮಾನ ಹಾರಾಡಿದೆ. ಗಾಜಾದಲ್ಲಿರುವ ಪ್ಯಾಲೆಸ್ತೀನಿಯರು ದಕ್ಷಿಣ ಇಸ್ರೇಲ್ ಗೆ ಬೆಂಕಿ ಹಚ್ಚುವ ಬಲೂನ್ ಗಳನ್ನುಹಾರಿಸಿದ ಬಳಿಕ ಇಸ್ರೇಲ್ ವಾಯುಪಡೆ ಕೂಡಾ ಗಾಜಾ ಪಟ್ಟಿಯ ಮೇಲೆ ವೈಮಾನಿಕ ದಾಳಿ ನಡೆಸಿದೆ.

ಕಳೆದ ತಿಂಗಳು ನಡೆದ  ಕದನ ವಿರಾಮ ಒಪ್ಪಂದ ಬಳಿಕ ನಡೆದ ಮೊದಲ ದೊಡ್ಡ ದಾಳಿ ಇದಾಗಿದೆ. ಮೇ ತಿಂಗಳಿನಲ್ಲಿ 11 ದಿನ ನಡೆದ ಯುದ್ಧದಲ್ಲಿ 13 ಮಂದಿ ಇಸ್ರೇಲ್ ಮಂದಿ ಹಾಗೂ 260 ಮಂದಿ ಪ್ಯಾಲೆಸ್ತೀನಿಯರು ಮೃತಪಟ್ಟಿದ್ದರು.

ಇಸ್ರೇಲ್ ನ ವಾಯುಪಡೆಯು ದಕ್ಷಿಣ ಗಾಜಾ ನಗರವಾದ ಖಾನ್ ಯೂನೆಸ್ ನ ಪೂರ್ವದಲ್ಲಿ ಒಂದು ತಾಣವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ ಎಂದು ಪ್ಯಾಲೇಸ್ತೀನಿಯನ್ ಮೂಲಗಳ ಮಾಹಿತಿ ನೀಡಿವೆ.

ಗಾಜಾ ಪಟ್ಟಿಯಿಂದ ಬೆಂಕಿ ಹಚ್ಚುವ ಬಲೂನ್ ಹಾರಾಡಿದ ಪರಿಣಾಮ ಪ್ರತಿಯಾಗಿ, ಖಾನ್ ಯೂನೆಸ್‌ ನಲ್ಲಿನ ಭಯೋತ್ಪಾದಕರಿಗೆ ಸೌಲಭ್ಯಗಳು ಒದಗಿಸುವ ಮತ್ತು ಸಭೆಗಳನ್ನು ನಡೆಸುವ ಸ್ಥಳಗಳನ್ನು ಗುರಿಯಾಗಿಸಲಾಗಿದೆ ಎಂದು ಇಸ್ರೇಲ್ ಪ್ರತಿಕ್ರಿಯೆ ನೀಡಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss