ಹೊಸದಿಗಂತ ಆನ್ಲೈನ್ ಡೆಸ್ಕ್:
ಇಸ್ರೇಲಿನ ಮೂರನೇ ಅತಿದೊಡ್ಡ ನಗರ ಹೈಫಾ. ಇಂದಿನ ದಿನ ಹೈಫಾದ ವಿಮೋಚನಾ ದಿನವನ್ನಾಗಿ ನೆನಪಿಡಲಾಗುತ್ತದೆ. ಆದರೆ ದೂರದ ಇಸ್ರೇಲ್ನ ಹೈಫಾ ನಗರಕ್ಕೂ ಮೈಸೂರಿಗೂ ನಂಟಿದೆ.. ಅದೇನು ಗೊತ್ತಾ?
- ಸೆ.23, 1918, ಯುದ್ಧ ಮುಗಿಯುವ ಎರಡು ತಿಂಗಳು ಮುನ್ನ ಮೈಸೂರು, ಜೋಧ್ಪುರ ಹಾಗೂ ಹೈದರಾಬಾದ್ ರೆಜಿಮೆಂಡ್ಗಳನ್ನು ಒಳಗೊಂಡ ಅಶ್ವದಳ ಬ್ರಿಗೆಡ್ಗೆ ಹೈಫಾವನ್ನು ವಶಪಡಿಸಿಕೊಳ್ಳಲು ಸೂಚಿಸಲಾಯಿತು.
- 1799 ರಲ್ಲಿ ಟಿಪ್ಪು ಸುಲ್ತಾನರ ಮರಣ ನಂತರ, ಅವರ ಸೈನ್ಯದ ಅವಶೇಷಗಳಿಂದ ಮೈಸೂರು ಲ್ಯಾನ್ಸರ್ಗಳನ್ನು ಬೆಳೆಸಲಾಯಿತು. ಇವರನ್ನು ಮೈಸೂರು ಮಹಾರಾಜರ ವೈಯಕ್ತಿಕ ಸೇನೆ ಎಂದೂ ಹೇಳಲಾಗುತ್ತದೆ.
- ಮೈಸೂರು ಮಹಾರಾಜರು ಮತ್ತು ಬ್ರಿಟಿಷರ ನಡುವಿನ ಮೈತ್ರಿಯನ್ನು ಗಮನದಲ್ಲಿಟ್ಟುಕೊಂಡು ರೆಗ್ಯುಮೆಂಟಾರ್ ಬಿ ಚಾಮರಾಜ ಅರಸರ ನೇತೃತ್ವದಲ್ಲಿ ಮಿತ್ರಪಕ್ಷಗಳನ್ನು ಬೆಂಬಲಿಸಲು ಲ್ಯಾನ್ಸರ್ಗಳನ್ನು ಕಳುಹಿಸಲಾಯಿತು.
- ಹೈಫಾ ಹೊರತುಪಡಿಸಿ, ಲ್ಯಾನ್ಸರ್ಗಳು ಮೊದಲ ಮಹಾಯುದ್ಧದ ಸಮಯದಲ್ಲಿ ಗಾಜಾ,ಈಜಿಪ್ಟ್, ಶರೋನ್, ಡಮಾಸ್ಕಸ್ ಮತ್ತು ಸೂಯೆಜ್ ಕಾಲುವೆ ಸೇರಿದಂತೆ ಇತರೆ ಯುದ್ಧಗಳನ್ನು ನೆಡೆಸಿದರು.
- ಮೈಸೂರು ರೆಜಿಮೆಂಟ್ನಲ್ಲಿ ಸುಮಾರು 29 ಅಧಿಕಾರಿಗಳು, 444 ಪುರುಷರು, 526 ಕುದುರೆಗಳು ಮತ್ತು 40 ಹೇಸರಗತ್ತೆಗಳು ಇದ್ದವು.
- ಹೈಫಾವನ್ನು ಬೇಧಿಸಲು ಮೆಷಿನ್ಗನ್ಗಳು ಬೇಕಿತ್ತು. ಆದರೆ ಲ್ಯಾನ್ಸರ್ಗಳು ಲ್ಯಾನ್ಸ್, ಈಟಿಯಿಂದ ಯುದ್ಧ ಗೆದ್ದಿದ್ದಾರೆ.
- ಜೋಧ್ಪುರದ ಜೊತೆ ಸೇರಿ ಮೈಸೂರು ಲ್ಯಾನ್ಸರ್ಸ್ 1350 ಜರ್ಮನ್ ಅಧಿಕಾರಿಗಳು, 35 ಒಟ್ಟೋಮನ್ ಅಧಿಕಾರಿಗಳು, 17 ಫಿರಂಗಿ ಬಂದೂಕು, 11 ಮಷಿನ್ ಗನ್ ಸೇರಿದಂತೆ 1350 ಜರ್ಮನ್ ಮತ್ತು ಒಟ್ಟೋಮನ್ ಕೈದಿಗಳನ್ನು ಸೆರೆಹಿಡಿದಿದ್ದಾರೆ.
- ಯುದ್ಧದಲ್ಲಿ ಎಂಟು ಮಂದಿ ಲ್ಯಾನ್ಸರ್ಸ್ ಮೃತಪಟ್ಟಿದ್ದು, 34 ಮಂದಿ ಗಾಯಗೊಂಡರು. 60 ಕುದುರೆಗಳನ್ನು ಕೊಲ್ಲಲಾಗಿದ್ದು, 83 ಕುದುರೆಗಳು ಗಾಯಗೊಂಡವು. ಸಾವು-ನೋವಿನಲ್ಲಿಯೂ ಧೃತಿಗೆಡದ ಲ್ಯಾನ್ಸರ್ಸ್ ತಾವು ಹೋದ ಕೆಲಸ ಮುಗಿಸಿಯೇ ಮೈಸೂರಿಗೆ ವಾಪಾಸಾದರು. ಮನೆಗೆ ಬಂದ ಲ್ಯಾನ್ಸರ್ಸ್ನನ್ನು ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಗುರುತಿಸಿ ಪುರಸ್ಕರಿಸಿದರು.
- ನವೆಂಬರ್ 15 , 1953 ರಂದು ಮೈಸೂರು ಲ್ಯಾನ್ಸರ್ಸ್ಗಳನ್ನು ವಿಸರ್ಜಿಸಲಾಯಿತು. ಇಸ್ರೇಲ್ನಲ್ಲಿ ಭಾರತೀಯ ಸೈನಿಕರ ಸುಮಾರು 800 ಸಮಾಧಿಗಳಿವೆ.