ಮತ್ತೊಮ್ಮೆ ಇಸ್ರೇಲ್ ಪ್ರಧಾನಿಯಾಗುವತ್ತ ಮುನ್ನಡೆದ ಬೆಂಜಮಿನ್‌ ನೇತನ್ಯಾಹು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಸ್ರೇಲ್‌ ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗುವತ್ತ ಮುನ್ನಡೆದಿದ್ದಾರೆ.
ದೇಶದ ರಾಷ್ಟ್ರೀಯ ಚುನಾವಣೆಗಳ ಸುಮಾರು 85 ಪ್ರತಿಶತ ಮತಗಳನ್ನು ಎಣಿಸಲಾಗಿದ್ದು, ಮತದಾರರು ನೇತನ್ಯಾಹು ಹಾಗೂ ಅವರ ಬಲಪಂಥೀಯ ಮಿತ್ರರಿಗೆ ಬಹುಮತದಂತೆ ನೀಡಿದ್ದಾರೆ.
ಇನ್ನೂ ಮತ ಎಣಿಕೆ ನಡೆಯುತ್ತಿದ್ದು, ಫಲಿತಾಂಶ ಅಂತಿಮವಾಗಿಲ್ಲ. ಆದರೆ ಪ್ರಾಥಮಿಕ ಸೂಚನೆಗಳಂತೆ  ನೇತನ್ಯಾಹು ನೇತೃತ್ವದ ಒಕ್ಕೂಟವು 65 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ನೇತನ್ಯಾಹು ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಇಸ್ರೇಲ್‌ ನ 120 ಸ್ಥಾನಗಳ ಪೈಕಿ 62 ಸ್ಥಾನಗಳನ್ನು ಗೆದ್ದರೆ ಬಹುಮತ ಲಭಿಸಲಿದೆ.
ಚುನಾವಣೆ ಫಲಿತಾಂಶ ಇಸ್ರೇಲಿ ಮತದಾರರಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಬದಲಾವಣೆಯನ್ನು ಸೂಚಿಸುತ್ತಿದೆ. “ನಾವು ದೊಡ್ಡ ವಿಜಯದ ಅಂಚಿನಲ್ಲಿದ್ದೇವೆ” ಎಂದು 73 ವರ್ಷದ ನೆತನ್ಯಾಹು ಬುಧವಾರ ಜೆರುಸಲೆಮ್‌ನಲ್ಲಿ ನಡೆದ ಸಭೆಯಲ್ಲಿ ಬೆಂಬಲಿಗರರೊಂದಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!