2030ರಿಂದ ಇಸ್ರೋ ಬಾಹ್ಯಾಕಾಶ ಪ್ರವಾಸ ಯೋಜನೆ: ಟಿಕೆಟ್ ದರ ಎಷ್ಟು ಗೊತ್ತಾ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಯೆಡೆಗೆ ಹಲವು ದೇಶಗಳು ಕ್ರಮ ಕೈಗೊಂಡಿವೆ. ಈ ವೇಳೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಹಿರಿಯ ಅಧಿಕಾರಿಗಳು 2030ರ ವೇಳೆಗೆ ಬಾಹ್ಯಾಕಾಶ ಪ್ರಯಾಣವನ್ನು ಮಾಡಬಹುದು ಎಂದು ತಿಳಿಸಿದ್ದಾರೆ.

ಬಾಹ್ಯಾಕಾಶಕ್ಕೆ ಪ್ರಯಾಣಿಸಲು ಪ್ರತಿ ವ್ಯಕ್ತಿಗೆ ಸುಮಾರು 6 ಕೋಟಿ ವೆಚ್ಚ ತಗುಲಬಹುದು ಎಂದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್‌ ಹೇಳಿದ್ದಾರೆ.

ಈ ಪ್ರವಾಸದಲ್ಲಿ ಉಪ ಕಕ್ಷೆಗೆ( ಸುಮಾರು 100 ಕಿ.ಮೀ ಎತ್ತರದ ಬಾಹ್ಯಾಕಾಶದ ಅಂಚು) ಅಥವಾ ಕಕ್ಷೆಗೆ(400 ಕಿ.ಮೀ) ಕರೆದೊಯ್ಯಲಾಗುತ್ತದೆ ಎನ್ನುವುದು ಸ್ಪಷ್ಟವಾಗಿಲ್ಲ. ಪ್ರವಾಸಿಗರು ಬಾಹ್ಯಾಕಾಶದ ಅಂಚಿನಲ್ಲಿ 25 ನಿಮಿಷ ಸಮಯ ಕಳೆಯಲಿದ್ದಾರೆ ಹಾಗೂ ಗುರುತ್ವಾಕರ್ಷಣೆ ವಾತಾವರಣದ ಅನುಭವವನ್ನು ಪಡೆಯಲಿದ್ದಾರೆ.

ಸುರಕ್ಷಿತ ಮತ್ತು ಮರುಬಳಕೆ ಮಾಡಬಹುದಾದ ರಾಕೆಟ್‌ ನಲ್ಲಿ ಯಾನ ಕೈಗೊಳ್ಳಲಾಗುತ್ತದೆ. ಇದು ಮಿತ ವೆಚ್ಚಕ್ಕೆ ಕಾರಣವಾಗಲಿದ್ದು, ಟಿಕೆಟ್‌ ದರ ಸುಮಾರು ಆರು ಕೋಟಿ ರೂಪಾಯಿ ಇರಲಿದೆ. ಈ ಪ್ರವಾಸ ಕೈಗೊಂಡವರು ಕೂಡ ಬಾಹ್ಯಾಕಾಶ ಯಾನಿಗಳು ಎಂದು ಹೇಳಿಕೊಳ್ಳಬಹುದು ಎಂದು ಸೋಮನಾಥ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!