Sunday, November 27, 2022

Latest Posts

ಐಟಿ ಎನಿಮೇಶನ್: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಯ ಗಮನಾರ್ಹ ಸಾಧನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ ಶಾಲಾ ವಿಜ್ಞಾನಮೇಳದ ಐಟಿ ಎನಿಮೇಶನ್ ವಿಭಾಗದಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ೧೦ನೇ ತರಗತಿಯ ವಿದ್ಯಾರ್ಥಿ ಅಭಯ ಶರ್ಮ ರಾಜ್ಯಮಟ್ಟದಲ್ಲಿ ಸ್ಪರ್ಧಿಸಿ ಬಿ ಗ್ರೇಡ್ ಪಡೆದಿರುತ್ತಾನೆ. ಶನಿವಾರ ಎರ್ನಾಕುಳಂನ ಸರಕಾರೀ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸ್ಪರ್ಧೆ ಜರಗಿತು. ರಾಜ್ಯ ವಿವಿಧ ಜಿಲ್ಲೆಗಳಿಂದ ಒಟ್ಟು ೨೯ ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ಈತ ಉಪಜಿಲ್ಲೆಯಲ್ಲಿ ಎಗ್ರೇಡ್ ದ್ವಿತೀಯ ಹಾಗೂ ಜಿಲ್ಲಾಮಟ್ಟದಲ್ಲಿ ಎ ಗ್ರೇಡ್‌ನೊಂದಿಗೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ತೇರ್ಗಡೆಯಾಗಿದ್ದನು. ಈತನ ಸಾಧನೆಗೆ ಅಧ್ಯಾಪಕ ವೃಂದ, ಆಡಳಿತ ಸಮಿತಿ, ರಕ್ಷಕ ಶಿಕ್ಷಕ ಸಂಘ ಅಭಿನಂದಿಸಿದೆ. ಪಂಜಿತ್ತಡ್ಕ ಸತ್ಯನಾರಾಯಣ ಶರ್ಮ ಹಾಗೂ ಪ್ರತಿಭಾ ಇವರ ದ್ವಿತೀಯ ಪುತ್ರ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!