ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಸಗಣಿ ಮತ್ತು ಗೋ ಮೂತ್ರ ಕೊರೋನಾದಿಂದ ಬಚಾವ್ ಮಾಡುತ್ತದೆ ಎಂಬ ನಂಬಿಕೆಯಿಂದ ಗುಜರಾತಿನ ಅಹಮದಾಬಾದ್ ಜನರು ಅವುಗಳ ಮಿಶ್ರಣವನ್ನು ದೇಹಕ್ಕೆ ಹಚ್ಚಿಕೊಳ್ಳುತ್ತಿರುವ ವಿಡಿಯೋವೊಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಈ ವಿಡಿಯೋ ನೋಡಿದರೆ ಅಳಬೇಕೋ ಅಥವಾ ನಗಬೇಕೋ ಗೊತ್ತಾಗುತ್ತಿಲ್ಲ ಎಂದು ಅಡಿಬರಹ ಬರೆದು ಅಖಿಲೇಶ್ ಯಾದವ್ ಫೋಸ್ಟ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಪ್ರತಿ ದಿನ ಅಹಮದಾಬಾದ್ನ ಶ್ರೀ ಗುರುಕುಲ ವಿಶ್ವವಿದ್ಯಾ ಪ್ರತಿಷ್ಠಾಣಂ ಹೆಸರಿನ ಶಾಲೆಯಲ್ಲಿ ಈ ರೀತಿ ದೇಹಕ್ಕೆ ಸಗಣಿ ಮತ್ತು ಗೋ ಮೂತ್ರ ಲೇಪಿಸಿಕೊಳ್ಳ ಈ ಅಭ್ಯಾಸ ನಡೆಯುತ್ತಿದೆ. ಅಚ್ಚರಿಯಂದರೇ ತಾವು ಲೇಪಿಸಿಕೊಂಡ ಸಗಣಿ ಮತ್ತು ಗೋವಿನ ಮಿಶ್ರಣವನ್ನು ಹಾಲು ಮತ್ತು ಮಜ್ಜಿಗೆಯಿಂದ ತೊಳೆಯುತ್ತಾರೆ.
🙏🏻🙏🏻
— MADHUKAR ARORA (micky) (@micky_madhukar) May 12, 2021