VIRAL VIDEO | ಜೀವನದಲ್ಲಿ ಏಳು ಬೀಳು ಸಾಮಾನ್ಯ, ವಧು ಎತ್ತಿಕೊಂಡೇ ಬಿದ್ದ ವರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದುವೆಯಾದ ನಂತರ ದಂಪತಿ ಏಳು ಬೀಳು ಎಲ್ಲದರಲ್ಲೂ ಸಮಾನರು! ಇದಕ್ಕೆ ನಿದರ್ಶನದಂತೆ ವರನೊಬ್ಬ ಪತ್ನಿಯ ಸಮೇತ ಬಿದ್ದಿದ್ದಾನೆ. ಹೌದು, ಮದುವೆಯ ಮಂಟಪದಿಂದ ಇಳಿಯುವಾಗ ಕಾಲು ಜಾರಿ ಪತ್ನಿ ಸಮೇತ ವರ ಬಿದ್ದಿದ್ದು, ಒಂದು ಕ್ಷಣ ಏನು ಮಾಡಲಿ ತಿಳಿಯದೇ ನಕ್ಕುಬಿಟ್ಟಿದ್ದಾನೆ.

ಗಾಬರಿಯಾದ ವಧು ಗಂಡನಿಗೇನಾಯ್ತೋ ಎಂದು ಪಿಳಿಪಿಳಿ ಕಣ್ಣುಬಿಟ್ಟಿದ್ದು, ವರ ಆಕೆ ಕೆನ್ನೆಗೆ ಮುತ್ತಿಟ್ಟು ಏನೂ ಆಗಿಲ್ಲ ಎಂದು ನಗುತ್ತಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಇದೆಲ್ಲಾ ಸಾಮಾನ್ಯ ಬಿಡಿ, ಬಿದ್ದುಬಿಡೋದು ಮಾಮೂಲಿ ಅದರಲ್ಲೂ ನಗೋದು ಸ್ಪೆಷಲ್ ಎಂದಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಗಂಡ-ಹೆಂಡತಿ ಪ್ರೀತಿ ನೋಡಿ ಖುಷಿಪಟ್ಟಿದ್ದಾರೆ.

https://www.instagram.com/reel/CmQ6YP0rBZ6/?utm_source=ig_web_copy_link

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!